• Wed. Jun 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಚೇಂಪಿ : ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ -ಬ್ರಹ್ಮಾವರ ತಾಲೂಕು ಪ್ರಭಾರ ತಹಶೀಲ್ದಾರ ಶೋಭಾ ಲಕ್ಷ್ಮೀ

ByKiran Poojary

Sep 17, 2023

ಕೋಟ: ಕೋಟ ಶ್ರೀ ವಿರಾಡ್ವಿಶ್ವಬ್ರಾಹಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ವಿಶ್ವ ಕರ್ಮ ಕಲಾವೃಂದ , ವಿಶ್ವಜ್ಯೋತಿ ಮಹಿಳಾ ಬಳಗದ ವತಿಯಿಂದ ವಿಶ್ವಕರ್ಮ ಸಾಂಸ್ಕøತಿಕ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ದಂಪತಿಗಳ ಸಂಕಲ್ಪ ಪೂಜೆಯೊಂದಿಗೆ ಭಾನುವಾರ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಜರುಗಿತು.

ಬ್ರಹ್ಮಾವರ ತಾಲೂಕು ಪ್ರಭಾರ ತಹಶೀಲ್ದಾರ ಶೋಭಾ ಲಕ್ಷ್ಮೀ ಈ ಸಂದರ್ಭ ದೀಪ ಬೆಳಗಿ ಪಂಚಮುಖಿ ವಿಶ್ವಕರ್ಮ ದೇವರ ಭಾವ ಚಿತ್ರಕ್ಕೆ ಹೂವಿನ ಮಾಲೆ ಹಾಕಿ ನಮಿಸಿದರು.
ಬಳಿಕ ಅವರು ಮಾತನಾಡಿ ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ . ಇಂದು ನಾವು ಚಂದ್ರ ಯಾನದಂತ ಸಾಧನೆಗೆ ದೇವಶಿಲ್ಪಿ ವಿಶ್ವಕರ್ಮ ಪರಬ್ರಹ್ಮನ ಒಂದು ಅಂಶ . ದ್ವಾರಕಾ ನಗರ , ಪುಷ್ಪಕ ವಿಮಾನಗಳು ಪ್ರಾಚೀನ ಯುಗದಲ್ಲಿ ಮಾಡಿದ ಉದಾಹರಣೆ ಇದೆ ಎಂದರು .

ಇದೇ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪ್ರಭಾರ ತಹಶೀಲ್ದಾರ ಶೋಭಾ ಲಕ್ಷ್ಮೀ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಕೋಟ ಶ್ರೀ ವಿರಾಡ್ವಿಶ್ವಬ್ರಾಹಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ ,ಐರೋಡಿ ಕೇಶವ ಆಚಾರ್ಯ , ರಮೇಶ್ ಆಚಾರ್ಯ ಚೇಂಪಿ , ವಿಶ್ವ ಕರ್ಮ ಕಲಾವೃಂದ ಅಧ್ಯಕ್ಷ ವೆಂಕಟೇಶ್ ಆಚಾರ್ಯ ,ಕಾರ್ಯದರ್ಶಿ ನಿತ್ಯಾನಂದ ಅಚಾರ್ಯ, ವಿಶ್ವಜ್ಯೋತಿ ಮಹಿಳಾ ಬಳಗದ ಸವಿತಾ ಚಂದ್ರ ಶೇಖರ ಆಚಾರ್ಯ, ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟ ಶ್ರೀ ವಿರಾಡ್ವಿಶ್ವಬ್ರಾಹಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ವಿಶ್ವಕರ್ಮ ಕಲಾವೃಂದ , ವಿಶ್ವಜ್ಯೋತಿ ಮಹಿಳಾ ಬಳಗದ ವತಿಯಿಂದ ವಿಶ್ವಕರ್ಮ ಸಾಂಸ್ಕøತಿಕ ಸಭಾ ಭವನದಲ್ಲಿ ಬ್ರಹ್ಮಾವರ ತಾಲೂಕು ಪ್ರಭಾರ ತಹಶೀಲ್ದಾರ ಶೋಭಾ ಲಕ್ಷ್ಮೀ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

Leave a Reply

Your email address will not be published. Required fields are marked *