• Mon. May 13th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಕೆಲಸವಾಗಬೇಕು-ಬಿ ಆರ್ ಲಕ್ಷಣ ರಾವ್

ByKiran Poojary

Nov 27, 2023

ಕೋಟ : ಇಂದಿನ ಮಕ್ಕಳು ಮುಂದಿನ ಭವ್ಯ ಭಾರತದ ಅಡಿಪಾಯಗಳು, ಅವರಲ್ಲಿನ ಸೂಪ್ತ ಪ್ರತಿಭೆಗಳನ್ನು ಗುರುತಿಸುವ ವೇದಿಕೆ ಕಲ್ಪಿಸಬೇಕಾದ ಅನಿವಾರ್ಯತೆಯಿದೆ, ಈ ನಿಟ್ಟಿನಲ್ಲಿ ಮಕ್ಕಳನ್ನು ಕೇಂದ್ರೀಕರಿಸಿಕೊAಡು ಥೀಮ್ ಪಾರ್ಕ್ನಲ್ಲಿ ಹಲವಾರು ತರಬೇತಿಗಳನ್ನು ನೀಡುತ್ತಿರುವುದು ಶ್ಲಾಘನೀಯ, ಕಾರಂತರು ಎನ್ನುವುದೇ ಒಂದು ವಿಸ್ಮಯಲೋಕ, ಅವರ ಬದುಕಿನ ಚಿತ್ರಣಗಳು, ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಪ್ರಸ್ತುತ ಕಾಲಘಟ್ಟಕ್ಕೂ ಮಾದರಿಯಾಗಿದೆ ಎಂದು ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಿ ಆರ್ ಲಕ್ಷಣ್‌ರಾವ್ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಅಮೋಘ ಹಿರಿಯಡ್ಕ ಸಹಯೋಗದಲ್ಲಿ ನಡೆದ ತಿಂಗಳ ಸಡಗರ-ಕಾರಂತ ಬಾಲಪುರಸ್ಕಾರ-ಸಂವಾದ-ಬಾಲ ಯಕ್ಷಗಾನ ವೈಭವ ಅನನ್ಯ-2023(ಪ್ರತಿಭೆಗಳ ಹೆಜ್ಜೆನಾದ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮೂರನೇ ವರ್ಷದ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಎಫ್. ಎಸ್. ಕೆ ಇಂಗ್ಲಿಷ್ ಮಿಡಿಯಂ ಸ್ಕೂಲ್ ಪೆರ್ಡೂರು ವಿದ್ಯಾರ್ಥಿನಿ ಸಾನಿಧ್ಯ ಆಚಾರ್ಯ, ಸೈಂಟ್ ಮೆರೀಸ್ ಆಂಗ್ಲಮಾಧ್ಯಮ ಶಾಲೆ ಕನ್ನರ್ಪಾಡಿ ವಿದ್ಯಾರ್ಥಿ ಅನ್ವಿತ್ ಆರ್. ಶೆಟ್ಟಿಗಾರ್, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ವಿದ್ಯಾರ್ಥಿ ನಿಧೀಶ್, ಜಿ.ಪ.ಸ.ಹಿ.ಪ್ರಾ.ಶಾಲೆ ಕಲಂಬಾಡಿಪದವು ವಿದ್ಯಾರ್ಥಿನಿ ಮನಸ್ವೀ ಕುಲಾಲ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ವಿದ್ಯಾರ್ಥಿ ವಿಶ್ರುತ್ ಸಾಮಗ, ರೋಟರಿ ಕೇಂದ್ರೀಯ ಶಾಲೆ ಮೂಡುಬಿದಿರೆ ವಿದ್ಯಾರ್ಥಿನಿ ಆಶ್ನಾಲೆನಾ ಪಿರೇರಾ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ವಿದ್ಯಾರ್ಥಿ ಅಕ್ಷರ ಪಟವಾಲ್, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ವಿದ್ಯಾರ್ಥಿ ನಿಹಾರ್ ಜೆ.ಎಸ್, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿ ಆದಿತ್ಯ ಆರ್, ಸರಸ್ವತಿ ವಿದ್ಯಾಲಯ ಸಿದ್ದಾಪುರ ವಿದ್ಯಾರ್ಥಿನಿ ವಿಧಾತ್ರಿ, ಎಸ್.ಆರ್, ಎಸ್. ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ ವಿದ್ಯಾರ್ಥಿ ವಿನೀಶ್ ಆಚಾರ್ಯ, ಎಚ್. ಎಂ.ಎA.ಇAಗ್ಲಿಷ್ ಪ್ರೀಸ್ಕೂಲ್ ಕುಂದಾಪುರ ವಿದ್ಯಾರ್ಥಿ ಆರ್ಯನ್ ಕೆ. ಪೂಜಾರಿ, ಪೋದಾರ್ ಇಂಟರ್‌ನ್ಯಾಶನಲ್ ಸ್ಕೂಲ್ ಹಾಸನ ವಿದ್ಯಾರ್ಥಿನಿ ಲಾಲಿತ್ಯ ಕುಮಾರ್, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ವಿದ್ಯಾರ್ಥಿನಿ ಅನುಷ್ಕಾ ಎನ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಾಡಿ- ಹರ್ಕಾಡಿ ವಿದ್ಯಾರ್ಥಿನಿ ಶರಧಿ ಎಸ್, ಕ್ರೆöÊಸ್ಟ್ಕಿಂಗ್ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೆöÊಮರಿ ಸ್ಕೂಲ್ ಕಾರ್ಕಳ ವಿದ್ಯಾರ್ಥಿನಿ ಅಪೂರ್ವ ನಾಯ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾÊಬ್ರಕಟ್ಟೆ ವಿದ್ಯಾರ್ಥಿನಿ ಪ್ರಣೀತಾ, ಶ್ರೀ ದು.ಪ.ಅ.ಹಿ.ಪ್ರಾ.ಶಾಲೆ ಮಂದಾರ್ತಿ ವಿದ್ಯಾರ್ಥಿನಿ ಕೃತಿಕಾ, ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ. ಶಾಲೆ ಖಾರ್ವಿಕೇರಿ ಗಂಗೊಳ್ಳಿ ವಿದ್ಯಾರ್ಥಿನಿ ಆರಾಧ್ಯ ಆರ್, ವಿಶ್ವವಿನಾಯಕ ನ್ಯಾಶನಲ್ ಇಂಗ್ಲಿಷ್ ಮಿಡಿಯಂ ಸ್ಕೂಲ್ ತೆಕ್ಕಟ್ಟೆ ವಿದ್ಯಾರ್ಥಿ ಯಕ್ಷತ್ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ವಿದ್ಯಾರ್ಥಿನಿ ರಿಯಾ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಎ.ಆರ್.ಪಿ ತುಮಕೂರು ವಿದ್ಯಾರ್ಥಿ ಆರ್ಯ ಆರ್ ಭಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರವಡಿ ವಿದ್ಯಾರ್ಥಿ ಪ್ರಣವ್, ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆ ವಿದ್ಯಾರ್ಥಿನಿ ಪರಿಣಿತ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ವಿದ್ಯಾರ್ಥಿನಿ ಪಿ. ಮಹಿಮಾ ಕಾರಂತ ವಿಶೇಷ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಸಾಹಿತ್ಯಿಕ-ಸಾಂಸ್ಕೃತಿಕ ಚಿಂತಕಿ ಪೂರ್ಣಿಮಾ ಸುರೇಶ್, ಕಾರಂತ ಪ್ರತಿಷ್ಠಾನ ಟ್ರಸ್ಟಿ ಸುಶೀಲ ಸೋಮಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅನಿತಾ ನರೇಂದ್ರ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ ಸ್ವಾಗತಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ವಂದಿಸಿದರು.

ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಅಮೋಘ ಹಿರಿಯಡ್ಕ ಸಹಯೋಗದಲ್ಲಿ ನಡೆದ ತಿಂಗಳ ಸಡಗರ-ಕಾರಂತ ಬಾಲಪುರಸ್ಕಾರ-ಸಂವಾದ-ಬಾಲ ಯಕ್ಷಗಾನ ವೈಭವ ಅನನ್ಯ-2023(ಪ್ರತಿಭೆಗಳ ಹೆಜ್ಜೆನಾದ) ಕಾರ್ಯಕ್ರಮದಲ್ಲಿ ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಿ ಆರ್ ಲಕ್ಷಣ್‌ರಾವ್ ಇವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್, ಸಾಹಿತ್ಯಿಕ-ಸಾಂಸ್ಕೃತಿಕ ಚಿಂತಕಿ ಪೂರ್ಣಿಮಾ ಸುರೇಶ್, ಕಾರಂತ ಪ್ರತಿಷ್ಠಾನ ಟ್ರಸ್ಟಿ ಸುಶೀಲ ಸೋಮಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *