ಕಸ್ತೂರ್ಬ ಹಾಸ್ಪಿಟಲ್ ನಲ್ಲಿ ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸಿ ಪೈ ಗ್ರೂಪಿನ ಪ್ರಮುಖ ಕೊಂಡಿ ಎಂದರೇ ತಪ್ಪಾಗಲಿಕಿಲ್ಲ, ಕೆಎಂಸಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಪ್ರೀತಿಪಾತ್ರರು. ಬಡ ರೋಗಿಗಳಿಗೆ, ಆಶಕ್ತರಿಗೆ ಸಹಾಯ ಹಸ್ತ ನೀಡಿದ ದೇವರು ಇವರು. ತನ್ನದೆ ಆದಂತಹ ಚಾಪನ್ನು ಮೂಡಿಸಿ ನೇರ ನುಡಿ, ಹಿಡಿದ ಕೆಲಸ ಛಲ ಬಿಡದೇ ಸಾಧಿಸುವುದೇ ಇವರ ವೈಖರಿ. ತನ್ನದೆ ಆದಂತಹ ಚಾಪನ್ನು ಮೂಡಿಸಿದ್ದಾರೆ.

ಹಲವು ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸುಮಾರು 4500 ಆಶಕ್ತರಿಗೆ ಸಹಾಯ ಹಸ್ತ ಚಾಚ್ಚಿದರೆ. ಕಷ್ಟ ಎಂದು ಬಂದಾಗ ಕೆಎಂಸಿಯಲ್ಲಿ ತಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡಿ ಸಮಾಜಮುಖಿ ಕೆಲಸಗಳನ್ನು ಮಾಡಿ ಇನ್ನೇನು ಒಂದು ತಿಂಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತೇನೆ ಎನ್ನುವಾಗ ತಾವು ಕೆಲಸ ಮಾಡುವ ಸಂಸ್ಥೆಗೆ ಏನಾದರೂ ಕಿರು ಸೇವೆಯನ್ನು ಮಾಡಬೇಕು ಎಂಬ ಮನೋಭಾವ ಇಟ್ಟುಕೊಂಡು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪ್ರಾರಂಭಿಸಿ 1-11-2023 ರಿಂದ 30-11-2023 ರ ತನಕ ಸತತವಾಗಿ ಒಂದು ತಿಂಗಳು ರಕ್ತದಾನ ಮಾಡಿ ಎಷ್ಟೋ ಪ್ರಾಣ ಉಳಿಸುವ ಕೆಲಸವನ್ನು ಮಾಡಿದಂತಹ ವ್ಯಕ್ತಿ ಎಂದರೆ ಮನೇಲಿ ಗುಜ್ಜಿ ನವೀನ್ ರಾವ್ ಎಂದರೆ ತಪ್ಪಾಗಲಿಕ್ಕಿಲ್ಲ.
ಇವರ ಪರಿಶ್ರಮ ಕೆಎಂಸಿಯಲ್ಲಿ 40ವರ್ಷ ಸೇವೆಯನ್ನು ಮಾಡಿ ತನ್ನ ಸಂಸ್ಥೆಗೆ ಒಂದು ತಿಂಗಳು ರಕ್ತದಾನ ಶಿಬಿರ ಮಾಡಿಸಿ ಹೆಗ್ಗಳಿಕೆಗೆ ಪಾತ್ರರಾದ ನವೀನ್ ರಾವ್ ಅವರು ಎಲ್ಲಾ ಡಾಕ್ಟರ್ಸ್ ಹಾಗೂ ಪೈ ಗ್ರೂಪ್ ಅವರ ಗೌರವಕ್ಕೆ ಪಾತ್ರರಾಗಿದ್ದಾರೆ . ಕೆಎಂಸಿ ಸಂಸ್ಥೆ ಯಲ್ಲಿ ನವೀನ್ ರಾವ್ ಅವರ ಸೇವೆ ಇನ್ನೂ ಹೆಚ್ಚಿನ ಸೇವೆ ಮಾಡಲಿ ಎಂದು ಹಾರೈಸುತ್ತಾ ಸ್ವಯಂ ಪ್ರೇರಿತ ರಕ್ತದಾನಕ್ಕೆ ಸಹಾಯ ಮಾಡಿದ ಎಲ್ಲಾ ಸಹಪಾಠಿಗಳಿಗೆ ಕೃತಜ್ಞತೆ ಹೇಳುತ್ತಾ ನವೀನ್ ರಾವ್ ಅವರಿಗೆ ಹಲವು ಗಣ್ಯ ವ್ಯಕ್ತಿಗಳಿಂದ ಸನ್ಮಾನದೊಂದಿಗೆ ಬೀಳ್ಕೊಡೆ ಸಮಾರಂಭ ನಡೆಸಿದರು. ಅವರಿಗೆ ಮತ್ತು ಅವರು ಕುಟುಂಬಕ್ಕೆ ಆಯುರ್ ಆರೋಗ್ಯ ಯಶಸ್ಸು ಸಿಗಲಿ ಎಂದು ಕೆಎಂಸಿ ಸಂಸ್ಥೆ ಹಾರೈಸಿದೆ.
