ಕೋಟ: ಶಾಲಾ ಮಕ್ಕಳ ಹಬ್ಬದ ಸಡಗರವನ್ನು ಸಂಪೂರ್ಣ ಮಕ್ಕಳದೇ ಕಾರ್ಯಕ್ರಮವಾಗಿಸುವ ಪರಿಕಲ್ಪನೆ ನಿಜಕ್ಕೂ ಅಭಿನಂದನೀಯ. ಗ್ರಾಮೀಣ ಪ್ರದೇಶದಲ್ಲಿದ್ದರೂ ಸದಾ ಹೊಸತನದ ಚಿಂತನೆಗಳೊAದಿಗೆರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಸಕುತ್ತೂರು ಪ್ರಾಥಮಿಕ ಶಾಲೆ ಇತರೆ ಶಾಲೆಗಳಿಗೆ ಮಾದರಿ” ಎಂದು ವಿಧಾನ ಪರಿಷತ್ ಸದಸ್ಯರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ನುಡಿದರು. ಅವರು ಹೆಸಕುತ್ತೂರು ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬದ ಸಡಗರ – ಬೆಳಕು ಈ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಕಾರ್ಯಕ್ರಮವನ್ನು ಝೀ ಟಿವಿಯ ಸರಿಗಮಪ ಕಾರ್ಯಕ್ರಮದ ಸೆಮಿಫೈನಲಿಸ್ಟ್ ಕುಮಾರಿ ಸಮೀಕ್ಷಾ ಸಾಲಿಗ್ರಾಮ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಸುಶಾಂತ್ ಜಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕ ರಾಗಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಪಡೆದ ಬಾಬಿ ಶೆಡ್ತಿ ಹಾಗೂ ಅಂಚೆಪೇದೆಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ರಾಜು ಕುಲಾಲ ಹಾಗೂ ಸಮೀಕ್ಷಾ ಸಾಲಿಗ್ರಾಮ ಇವರನ್ನು ಸನ್ಮಾನಿಸಲಾಯಿತು. ಹಾಗೆಯೇ ಪ್ರತಿಭಾ ಕಾರಂಜಿ, ಯೋಗ, ಕ್ರೀಡೆ, ರಸಪ್ರಶ್ನೆ,ಅಬಕಸ್, ಕರಾಟೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜೊತೆಗೆ ಪೋಷಕರಿಗಾಗಿ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳ ಸಾಂಸ್ಕöÈತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕಂಚಿನ ಪದಕ ಪಡೆದ ಶಾಲಾ ಹಳೆವಿದ್ಯಾರ್ಥಿ ಶಮಂತ್, ಶಾಲಾ ವಿಪಕ್ಷ ನಾಯಕಿ ಪ್ರಗತಿ, ಶಾಲಾ ಸಾಂಸ್ಕöÈತಿಕ ಸಚಿವರಾದ ಹನಿ ಮತ್ತು ಬ್ರಾಹ್ಮೀ, ಶಾಲಾ ಉಪನಾಯಕಿ ಮಾನ್ಯ ಉಪಸ್ಥಿತರಿದ್ದರು.
ಜೊತೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಉಡುಪಿ ಇದರ ಉಪನ್ಯಾಸಕರಾದ ಚಂದ್ರ ನಾಯ್ಕ್, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಣೇಶ್ ಕುಮಾರ್ ಶೆಟ್ಟಿ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕ್ರಷ್ಣ ಕೆದ್ಲಾಯ, ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹಶಿಕ್ಷಕರಾದ ಸಂಜೀವ ಎಂ, ಜಯಲಕ್ಷಿ÷್ಮ ಬಿ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ಸ್ವಾತಿ ಬಿ., ಗೌರವ ಶಿಕ್ಷಕಿ ಮಧುರ, ಎಸ್ ಡಿ ಎಂ ಸಿ ಸದಸ್ಯರು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ಫೂರ್ತಿ ಸ್ವಾಗತಿಸಿದರು. ಕೀರ್ತನಾ ವಂದಿಸಿದರು. ಸಹಶಿಕ್ಷಕರಾದ ಅಶೋಕ ತೆಕ್ಕಟ್ಟೆ ಹಾಗೂ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಹೆಸಕುತ್ತೂರು ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬದ ಸಡಗರ – ಬೆಳಕು ಕಾರ್ಯಕ್ರಮವನ್ನು ಝೀ ಟಿವಿಯ ಸರಿಗಮಪ ಕಾರ್ಯಕ್ರಮದ ಸೆಮಿಫೈನಲಿಸ್ಟ್ ಕುಮಾರಿ ಸಮೀಕ್ಷಾ ಸಾಲಿಗ್ರಾಮ ಉದ್ಘಾಟಿಸಿದರು. ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕಂಚಿನ ಪದಕ ಪಡೆದ ಶಾಲಾ ಹಳೆವಿದ್ಯಾರ್ಥಿ ಶಮಂತ್, ಶಾಲಾ ವಿಪಕ್ಷ ನಾಯಕಿ ಪ್ರಗತಿ, ಶಾಲಾ ಸಾಂಸ್ಕöÈತಿಕ ಸಚಿವರಾದ ಹನಿ ಮತ್ತು ಬ್ರಾಹ್ಮೀ, ಶಾಲಾ ಉಪನಾಯಕಿ ಮಾನ್ಯ ಉಪಸ್ಥಿತರಿದ್ದರು.
ಕೋಟ.ನ.30 ಬೆಳಕು ಸಡಗರ