• Sat. Feb 24th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಡಿಸೆಂಬರ್ 6ಕ್ಕೆ ಕೋಟದಲ್ಲಿ ಬೃಹತ್ ಆಧಾರ್ ಮೇಳ

ByKiran Poojary

Nov 30, 2023

ಕೋಟ: ಭಾರತೀಯ ಅಂಚೆ ಇಲಾಖೆ ಹಾಗೂ ಪಂಚವರ್ಣ ಯುವಕಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಹಾಗೂ ಕೋಟ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಡಿ.6 ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೋಟ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ನೊಂದಾವಣೆ ಮಾಡಿಕೊಳ್ಳುವವರು ಕೋಟ ಹಾಗೂ ಸಾಲಿಗ್ರಾಮ ಅಂಚೆ ಕಛೇರಿಯಲ್ಲಿ ಡಿ.1ರಿಂದ ಟೋಕನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಂಪರ್ಕ..ಮೊ:-9964136997
ಮೊ…9632948961

ಬೇಕಾಗುವ ದಾಖಲೆಗಳು :-
10 ವರ್ಷಗಳ ಹಿಂದಿನ ಕಾರ್ಡ್ ನವೀಕರಣ: ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್

ಹೆಸರು ಬದಲಾವಣೆ: ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಡಿತರ ಚೀಟಿ, ಪಾಸ್‌ಪೋರ್ಟ್

ಜನ್ಮ ದಿನಾಂಕ ಬದಲಾವಣೆ: SSಐಅ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್ ವಿಳಾಸ ಬದಲಾವಣೆ: ಪಂಚಾಯತ್ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ತಹಶಿಲ್ದಾರ್ ಅಥವಾ ಗೆಜೆಟೆಡ್ ಆಫೀಸರ್ ಸರ್ಟೀಫಿಕೇಟ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಮೊಬೈಲ್ ಸಂಖ್ಯೆ ಜೋಡಣೆ ಅಥವಾ ಬದಲಾವಣೆ: ಆಧಾರ್ ಕಾರ್ಡ್, ಮೊಬೈಲ್,5 ಮತ್ತು 15 ವರ್ಷ ಹೊಂದಿದ ಮಕ್ಕಳ ಬಯೋಮೆಟ್ರಿಕ್ ಅಸ್ಟೆçÃಟ್: ಆಧಾರ್ ಕಾರ್ಡ್, ಆಧಾರ್ ನೋಂದಣಿ (0-18 ವರ್ಷದವರೆಗೆ ಮಾತ್ರ): ಜನ್ಮ ದಿನಾಂಕ ದಾಖಲೆ, ವಿಳಾಸ ದಾಖಲೆ, ಯು.ಐ.ಡಿ.ಎ.ಐನಿಂದ ನಿಗದಿತವಾದ ಸೂಕ್ತ ದಾಖಲೆಗಳ ಮೂಲ ಪ್ರತಿಯನ್ನು ತರುವುದು.

Leave a Reply

Your email address will not be published. Required fields are marked *