ಕೋಟ: ಕೋಟ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್‌ನ ಉಪಾಧ್ಯಕ್ಷರಾದ ಪಾಂಡು ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಕಲಚೇತನ ವಿಶೇಷ ಗ್ರಾಮ ಸಭೆ ನಡೆಯಿತು.
ವಿಕಲಚೇತನ ತಾಲೂಕು ಸಂಯೋಜಕರಾದ ಮಧುಸೂದನ ರಾವ್ ಅವರು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಯು.ಡಿ.ಐ.ಡಿ ಕಾರ್ಡಿನ ಮಹತ್ವಗಳನ್ನು ತಿಳಿಸಿದರು. ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಡಿ.ಡಿ.ಆರ್.ಪಿ ನಿಲಿಶಾ ಸಂಸ್ಥೆಯಲ್ಲಿ ಸಿಗುವ ಉಚಿತ ಸೌಲಭ್ಯಗಳನ್ನು ವಿವರಿಸಿದರು.
ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿಯವರು ಕೆಲವು ವಿಕಲಚೇತನರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಎ.ಪಿ.ಎಲ್ ಕಾರ್ಡ್ ಇರುವ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸಿಗುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸುಧಾ ಎ ಪೂಜಾರಿ,ಶಾಂತಾ ಮಣೂರು, ಸುಚಿತ್ರ ಶೆಟ್ಟಿ,ಅಜಿತ್ ದೇವಾಡಿಗ, ಗ್ರಾಮೀಣ ಪುರ್ನವಸತಿ ಕಾರ್ಯಕರ್ತ ಅಬ್ಬೂಬ್ಬಕ್ಕರ್,ಮತ್ತಿತರರು ಇದ್ದರು. ಪಂಚಾಯತ್ ಕಾರ್ಯದರ್ಶಿಯಾದ ಶೇಖರ ಮರವಂತೆ ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಕೋಟ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್‌ನ ಉಪಾಧ್ಯಕ್ಷರಾದ ಪಾಂಡು ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಕಲಚೇತನ ವಿಶೇಷ ಗ್ರಾಮ ಸಭೆ ನಡೆಯಿತು. ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಪಂಚಾಯತ್ ಸದಸ್ಯರಾದ ಸುಧಾ ಎ ಪೂಜಾರಿ,ಶಾಂತಾ ಮಣೂರು ಮತ್ತಿತರರು ಇದ್ದರು.