ಕೋಟ: ಭೂಮಿಯ ಮೇಲಿನ ಸ್ವರ್ಗ ಎಸ್‌ಎಚ್‌ಆರ್‌ಎಫ್. ಎಸ್‌ಎಚ್‌ಆರ್‌ಎಫ್ ಕೇವಲ ಆಸ್ಪತ್ರೆಯಲ್ಲ. ಇದೊಂದು ಸುಂದರ ಆಧ್ಯಾತ್ಮ ಮತ್ತು ಅತ್ಯುತ್ತಮ ಆರೋಗ್ಯವನ್ನು ಪ್ರತಿಯೊಬ್ಬರಿಗೂ ಕರುಣಿಸಿ ಕೊಡುವ ಅದ್ಭುತ ಕೇಂದ್ರ. ಇಲ್ಲಿನ ಅತಿಥಿ ಸತ್ಕಾರ ಸಹಿತ ಆರೋಗ್ಯಕ್ಕೆ ಒತ್ತು ನೀಡಿ ಹಲವು ರೀತಿಯಲ್ಲಿ ನುರಿತ ವೈದ್ಯರು ನೀಡುವ ಮಾಹಿತಿ ಹಾಗೂ ಚಿಕಿತ್ಸೆ ಮತ್ತು ಯೋಗದ ಮಹತ್ವ ಸಾರುವ ಚಟುವಟಿಕೆಗಳು ಸೇರಿದಂತೆ ಆಧ್ಯಾತ್ಮದ ಪಾಸಿಟಿವ್ ಸ್ಪರ್ಶ ನೀಡುವ ಈ ಯೋಗಬನ ನಮ್ಮ ಜಗತ್ತಿಗೊಂದು ದೊಡ್ಡ ಕೊಡುಗೆ ಎಂದು ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ವಿನಯ ಪ್ರಸಾದ್ ಹೇಳಿದರು.
ಸಾಲಿಗ್ರಾಮ ಡಿವೈನ್ ಪಾರ್ಕ್ನ ಅಂಗ ಸಂಸ್ಥೆಯಾದ ಕೋಟ ಮೂಡುಗಿಳಿಯಾರಿನ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಟಾನ ಕೇಂದ್ರಕ್ಕೆ ಭೇಟಿ ನೀಡಿ ಜಗತ್ತಿನ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮಿಸಿ ಸಂಸ್ಥೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊAಡರು.
ಈ ಸಂದರ್ಭ ಸಂಸ್ಥೆಯ ವೈದ್ಯಕೀಯ ಆಡಳಿತ ನಿರ್ದೇಶಕ ಡಾ.ವಿವೇಕ್ ಉಡುಪ ವಿನಯ ಪ್ರಸಾದ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಮಾನಸ ವಿವೇಕ್ ಉಡುಪ, ಪ್ರತಿಷ್ಠಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾಲಿಗ್ರಾಮ ಡಿವೈನ್ ಪಾರ್ಕ್ನ ಅಂಗ ಸಂಸ್ಥೆಯಾದ ಕೋಟ ಮೂಡುಗಿಳಿಯಾರಿನ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಟಾನ ಕೇಂದ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ವಿನಯ ಪ್ರಸಾದ್ ಭೇಟಿ ನೀಡಿದರು.