• Sat. Feb 24th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕಲಾನರ್ತನ ಡಾನ್ಸ್ ಕ್ರೀವ್ -ಜನ್ನಾಡಿ ಇವರಿಂದ ಹೊಸ ಕೊಠಡಿಯ ಉದ್ಘಾಟನಾ ಕಾರ್ಯಕ್ರಮ

ByKiran Poojary

Dec 5, 2023

ಬ್ರಹ್ಮಾವರ*: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಜನ್ನಾಡಿಯ ಫೇವರೆಟ್ ಕಾಂಪ್ಲೆಕ್ಸ್ ನಲ್ಲಿರುವ ಕಲಾನರ್ತನ ಡಾನ್ಸ್ ಕ್ರೀವ್ ಇದರ ಹೊಸ ಕೊಠಡಿಯ ಉದ್ಘಾಟನಾ ಸಮಾರಂಭವು ಡಿ.3 ರಂದು ಬೆಳಿಗ್ಗೆ 10:00 ಗಂಟೆಗೆ ಕಟ್ಟಡದ ಮಾಲೀಕರಾದ ಹೆಚ್.ಶಂಕರ್ ಹೆಗ್ಡೆ ಅವರ ಅಮೃತ ಹಸ್ತದಿಂದ ನೆರವೇರಿತು.

ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಬೇಕಾಗುವ ಸ್ಫೂರ್ತಿ ಹಾಗೂ ಸಕಲ ಪ್ರೋತ್ಸಾಹವನ್ನ ನೀಡುತ್ತ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿರುವುದಲ್ಲದೆ ಟಿ.ವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ದೊಡ್ಡ ದೊಡ್ಡ ವೇದಿಕೆ ನೀಡಿ ಅವಕಾಶ ಕಲ್ಪಿಸಿ ಮಕ್ಕಳಲ್ಲಿನ ಕಲೆಯನ್ನ ಎತ್ತಿ ಪ್ರೋತ್ಸಾಹಿಸಿ ಪ್ರತಿಭೆಗಳನ್ನು ಬೆಳೆಸುವುದೇ ಕಲಾನರ್ತನದ ಗುರಿಯಾಗಿದೆ.

ಕಲಾನರ್ತನ ಡಾನ್ಸ್ ಕ್ರೀವ್ ತಂಡವು 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಭರತನಾಟ್ಯ ,ಸೆಮಿ ಕ್ಲಾಸಿಕಲ್, ಫಿಲ್ಮ್, ಹಿಪ್ ಹಾಪ್ ಜಾನಪದ, ನೃತ್ಯ ಕ್ಲಾಸ್ ನಡೆಸುತ್ತ , ಅತ್ಯಂತ ವಿಜೃಂಭಣೆಯಿಂದ ಪ್ರತಿವರ್ಷ ವಾರ್ಷಿಕೋತ್ಸವ ನಡೆಸುತ್ತ ಮಕ್ಕಳಿಗೆ ಉತ್ತೇಜಿಸುತ್ತಿದೆ.
ಇದಲ್ಲದೆ ಸಮಾಜಮುಖಿಯಾಗಿ ಮಕ್ಕಳ ವಿಧ್ಯಾಭ್ಯಾಸ, ಅನಾರೋಗ್ಯದ ಕಲಾವಿದರಿಗೆ ನೆರವು, ಕಲಾವಿದರಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಕಲಾವಿದರಿಗೆ ಬೆಳಕಾಗಿದೆ.

ಈ ಉದ್ಘಾಟನೆಯ ಸುಂದರ ಕ್ಷಣದಲ್ಲಿ ಜೊತೆಯಾದ ಪುಟಾಣಿ ಮಕ್ಕಳ ಪೋಷಕರು, ಬಂಧು ಮಿತ್ರರು-ಸ್ನೇಹಿತರ ಜೊತೆಗೆ ಊರ್ಮನಿ ಮಕ್ಕಳ್ ಟ್ರೋಲ್ ಪೇಜ್ ಟೀಮ್, ಟೀಮ್ ಆಸರೆ ಬಳಗ, ಟೀಮ್ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸದಸ್ಯರು ಹಾಗೂ ಪ್ರೋತ್ಸಾಹಿಸಿ, ಸಹಕರಿಸಿದ ಸರ್ವರಿಗೂ ಅಂತರಾಳದ ಕೃತಜ್ಞತೆಗಳನ್ನು ಟೀಂ ಕಲಾನರ್ತನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮನೀಶ್ ಕುಲಾಲ್ ಜನ್ನಾಡಿ ತಿಳಿಸಿದರು.

Leave a Reply

Your email address will not be published. Required fields are marked *