• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ನವಕುಂಡಗಳಲ್ಲಿ ಮೊಳಗಿದ ವೇದಘೋಷ, ಲೋಕಕಲ್ಯಾಣಾರ್ಥವಾಗಿ ಸಂಪನ್ನಗೊಂಡ ಕೋಟಿ ಗಾಯತ್ರೀ ಮಹಾಯಾಗ

ByKiran Poojary

Dec 30, 2023

ಕೋಟ: ಇತಿಹಾಸದ ಮೊದಲ ಬಾರಿ ಎಂಬAತೆ ಕೋಟದ ಪುರಾಣ ಹಿನ್ನಲೆಯುಳ್ಳ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಶ್ರೀ ಶಾಂತಿಮತೀ ಪ್ರತಿಷ್ಠಾನ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೋಟಿ ಗಾಯತ್ರೀ ಮಹಾಯಾಗ ಶನಿವಾರ 150ಕ್ಕೂ ಅಧಿಕ ಋತ್ವಿಜರ ವೇದಘೋಷಗಳೊಂದಿಗೆ ಪೂರ್ಣಾಹುತಿಗೊಂಡು ಸಂಪನ್ನಗೊಂಡಿತು.

ಶ್ರೀ ಶಾಂತಿಮತೀ ಪ್ರತಿಷ್ಠಾನ ತಮ್ಮ ಸಂಸ್ಥೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ, ಲಕ್ಷ ಲಲಿತಾ ಸಹಸ್ರನಾಮ ಡಿ.28ರಿಂದ ಮೊದಲ್ಗೊಂಡು 30ರ ಶನಿವಾರ ವೇದಮೂರ್ತಿ ಹೃಷಿಕೇಶ್ ಬಾಯರಿ,ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಇವರ ಪೌರೋಹಿತ್ಯದಲ್ಲಿ ಹಾಗೂ ವಿಪ್ರ ಭಾಂಧವರ ಹಾಗೂ ಭಕ್ತ ಸಮುದಾಯದ ನಡುವೆ ಯಶಸ್ವಿಯಾಗಿ ನೆರವೆರಿತು.

ಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಇವರ ನೇತೃತ್ವದಲ್ಲಿ ಸತತ ಒಂದು ವರ್ಷಗಳ ವಿಪ್ರ ಮನೆ ಮನಗಳಲ್ಲಿ ಮೊಳಗಿದ ಈ ಗಾಯತ್ರೀ ಹಾಗೂ ಲಕ್ಷ ಲಿಲಿತ ಸಹಸ್ರನಾಮ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಿತು.

ಅನ್ನದಾನಕ್ಕೆ ನೆರೆದ ಭಕ್ತಸ್ತೋಮ
ಮಹಾಯಾಗದ ಸಮಾರೋಪದ ಕೊನೆಯ ದಿನ ಕೋಟ ಹದಿನಾಲ್ಕು ಗ್ರಾಮಗಳಿಂದ ಸಾವಿರಾರು ಭಕ್ತರು ಸಾಕ್ಷಿಯಾದರಲ್ಲದೆ ಅನ್ನಪ್ರಸಾದ ಸ್ವೀಕರಿಸಿ ಸಂತುಷ್ಟರಾದರು.

ಸಮಾರೋಪ ಧಾರ್ಮಿಕ ಸಭಾಕಾರ್ಯಕ್ರಮ
ಶ್ರೀ ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಮಹಾಯಾಗ ಸಮಿತಿಯ ನೇತೃತ್ವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನೆರವೆರಿತು. ಈ ವೇಳೆ ವೇದಬ್ರಹ್ಮ ಬಾರಕೂರು ಹೃಷಿಕೇಶ್ ಬಾಯರಿ ಇವರಿಗೆ ಸಾಧಕ ಶಾಂತಿಮತೀ ಪ್ರತಿಷ್ಠಾನ ಗೌರವ ನೀಡಿ ಪುರಸ್ಕರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ಸಿ.ಓ ಡಾ.ಮಹಾಬಲೇಶ್ವರ ಎಂ.ಎಸ್ ಭಾಗವಹಿಸಿ ಮಾತನಾಡಿ ಶಾಂತಿಮತೀ ಸಂಸ್ಥೆ ದಶಮ ಸಂಭ್ರಮವನ್ನು ಅರ್ಥಪೂರ್ಣವಾಗಿಸಿಕೊಂಡು ಲೋಕದ ಹಿತಕ್ಕಾಗಿ ಮಹಾಯಾಗಗಳನ್ನು ಹಮ್ಮಿಕೊಂಡು ಸರ್ವರ ಹಿತಕ್ಕೆ ಶ್ರಮಿಸಿದೆ.ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ. ಯಾವುದೇ ಸಂಘಟನೆಗಳು ಹುಟ್ಟಿಕೊಳ್ಳುವುದು ಸುಲಭವಲ್ಲ ಅದನ್ನು ಅರ್ಥಪೂರ್ಣವಾಗಿ ಮುನ್ನೆಡೆಸುವ ಕಾರ್ಯ ಸರ್ವಶ್ರೇಷ್ಠವಾದದ್ದು ಈ ದಿಸೆಯಲ್ಲಿ ಶಾಂತಿಮತೀ ಪ್ರತಿಷ್ಠಾನದ ಕಾರ್ಯ ನಿಜಕ್ಕೂ ಪ್ರಶಂಸನೀಯಕಾರ್ಯ ಮಾಡಿದೆ ಎಂದರು.

ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ,ಉನ್ನತ ಶಿಕ್ಷಣ ಇಲಾಖೆ ಮೈಸೂರು ಇದರ ನಿವೃತ್ತ ನಿರ್ದೇಶಕ ಡಾ.ಟಿ.ಎನ್ ಪ್ರಭಾಕರ್, ಉದ್ಯಮಿ ಕೃಷ್ಣಮೂರ್ತಿ ಮಂಜರ್ ಇದ್ದರು.
ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಅತಿಥಿಗಳಿಗೆ ಶಾಲು ಹೋದಿಸಿ ಗೌರವಿಸಿದರೆ,ಪುರಸ್ಕಾರ ಪತ್ರವನ್ನು ಜತೆಕಾರ್ಯದರ್ಶಿ ದಯಾನಂದ ವಾರಂಬಳ್ಳಿ ವಾಚಿಸಿದರು. ಮಹಾಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಸ್ವಾಗಸಿ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು.
ಕಾರ್ಯಕ್ರಮವನ್ನು ಸಮತಿಯ ಸದಸ್ಯ ಕೆ.ರಾಜಾರಾಮ್ ಐತಾಳ್ ನಿರೂಪಿಸಿದರು.

ಶ್ರೀ ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಮಹಾಯಾಗ ಸಮಿತಿಯ ನೇತೃತ್ವದಲ್ಲಿ ವೇದಬ್ರಹ್ಮ ಬಾರಕೂರು ಹೃಷಿಕೇಶ್ ಬಾಯರಿ ಇವರಿಗೆ ಸಾಧಕ ಶಾಂತಿಮತೀ ಪ್ರತಿಷ್ಠಾನ ಗೌರವ ನೀಡಿ ಪುರಸ್ಕರಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ , ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ಸಿ.ಓ ಡಾ.ಮಹಾಬಲೇಶ್ವರ ಎಂ.ಎಸ್, ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ, ಮಹಾಯಾಗ ಸಮಿತಿ ಅಧ್ಯಕ್ಷ ಡಾ.ವಿದ್ವಾನ್ ವಿಜಯ್ ಮಂಜರ್ ಇದ್ದರು.

Leave a Reply

Your email address will not be published. Required fields are marked *