• Sat. May 18th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

RDPR ಅಧಿಕಾರಿ ಮತ್ತು ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ-2023

ByKiran Poojary

Dec 31, 2023

ಒತ್ತಡದ ಬದುಕಿನಿಂದ ಹೊರಬರಲು ಕ್ರೀಡೆ ಅತ್ಯಂತ ಸಹಕಾರಿಯಾಗಿದ್ದು ನೌಕರರು ಸಾರ್ವಜನಿಕ ಹಾಗೂ ಖಾಸಗಿ‌ ಜೀವನವನ್ನು ಸಮತೋಲನದಲ್ಲಿ ಕಾಪಾಡಲು ಇದರಿಂದ ಸಾಧ್ಯ..ಹಾಗಾಗಿ ನೌಕರರೆಲ್ಲರೂ ಎಲ್ಲಾ ಜಂಜಾಟವನ್ನು ಮರೆತು ಎರೆಡು ದಿನ ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಉಡುಪಿ
ಜಿಲ್ಲಾಧಿಕಾರಿ ಶ್ರೀಮತಿ ವಿದ್ಯಾಕುಮಾರಿ.ಕೆ. ‌ಹೇಳಿದರು.

ಅವರು ಜಿಲ್ಲಾ ಪಂಚಾಯತ್ ಉಡುಪಿ ,ಯುವ ಜನ ಸೇವೆ ಕ್ರೀಡಾ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ). ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶನಿವಾರದಂದು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರತ ನೌಕರರಿಗೆ, ಸ್ವಚ್ಛತಾ ಕಾರ್ಯಕರ್ತರಿಗೆ , ಜಿಲ್ಲಾ ಪಂಚಾಯತ್ ,ತಾಲೂಕು ಪಂಚಾಯತ್ ನೌಕರರಿಗೆ ಆಯೋಜಿಸಿದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯೊಂದು ಧ್ಯಾನವಿದ್ದಂತೆ ಅದು ..ಮನಸ್ಸಿಗೆ ಮುದ ನೀಡಿ‌ ನೌಕರರಲ್ಲಿ‌ ದಕ್ಷತೆ ,ಕಾರ್ಯ‌ಕ್ಷಮತೆಯನ್ನು ಹೆಚ್ಚಿಸುತ್ತದೆ.ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ .ಹೆಚ್.ರವರು ಹೇಳಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಜು ಮೋಗವೀರ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ,ರೋಶನ್ ಶೆಟ್ಟಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಏಳು ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು, ಎಲ್ಲನೌಕರರ ಹಾಗೂ ಸಿಬ್ಬಂದಿಗಳ ವೃಂದ ಸಂಘಗಳ ಜಿಲ್ಲಾಧ್ಯಕ್ಷರು , ಎಸ್.ಎಲ್.ಆರ್.ಎಮ್‌. ಸಂಘಗಳ ಅಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ,ಎಸ್. ಬಿ.ಎಂ ಸಿಬ್ಬಂದಿಗಳು ಹಾಗೂ ಎಲ್ಲಾ ಸ್ವಚ್ಛತಾ ಕಾರ್ಯಕರ್ತರು ಉಪಸ್ಥಿತರಿದ್ದರು. ಸಭಾಧ್ಯಕ್ಷತೆ ವಹಿಸಿದ ಪಂಚಾಯತ್ ಅಭಿವೃದ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ಮಂಜುನಾಥ.ಪಿ ಶೆಟ್ಟಿಯವರು ಪ್ರಾಸ್ತಾವಿಕ‌ ಮಾತನಾಡಿದರು. ಪಿಡಿಒ ಮಹೇಶ್ ಕೆ ನಿರೂಪಿಸಿದರು. ರಾಜ್ಯ ಪರಿಷತ್ ಸದಸ್ಯರಾದ ಸಿದ್ದೇಶ್.ಕೆ ವಂದಿಸಿದರು.

Leave a Reply

Your email address will not be published. Required fields are marked *