• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯಕ್ಷಗಾನ ಮನೋವಿಕಾಸಕ್ಕೆ ಪೂರಕ-ಜನಾರ್ದನ ಹಂದೆ”

ByKiran Poojary

Jan 20, 2024

ಕೋಟ: ಕಲೆಯು ಹೆಚ್ಚು ವಿಜೃಂಬಿಸುವುದು ಕರ್ನಾಟಕದ ಕರಾವಳಿಯಲ್ಲಿ. ನಾಲ್ಕು ಗಟ್ಟಿಯಾದ ಕಂಬದ ಚೌಕಟ್ಟಿನೊಳಗಿನ ಭದ್ರವಾಗಿ, ಶತಮಾನಗಳಿಂದ ಅತೀ ಸುಂದರವಾಗಿ ಪ್ರದರ್ಶನಗೊಳ್ಳುತ್ತಾ ಬಂದಿದೆ. ಯಕ್ಷಗಾನ ಕಲಾ ವಿಭಾಗದಲ್ಲಿ ಅಪಾರ ಅನುಭವದ ಕೋಟ ಸುದರ್ಶನ ಉರಾಳರು ಯಕ್ಷ ಸಂಘಟನೆಯಲ್ಲಿ ಪ್ರವೀಣರು. ಶ್ರಮದ ಸಂಘಟನೆಯಿಂದಲೇ ಜನಜನಿತವಾದ ಉರಾಳರು ಪ್ರತೀ ವರ್ಷ ಪ್ರಾಯೋಜಕರನ್ನು ಒಡಗೂಡಿಕೊಂಡು ಸಾಲಿಗ್ರಾಮದ ದೇವರ ವಾರ್ಷಿಕ ಅವಭೃತ ಸ್ನಾನದ ಸಂದರ್ಭದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಸಂಯೋಜಿಸುತ್ತಿರುವ ಕಾರ್ಯ ಸ್ತುತ್ಯರ್ಹ ಎಂದು ಮಂಗಳೂರು ಯಕ್ಷದಾಮದ ಜನಾರ್ಧನ ಹಂದೆ ಹೇಳಿದರು.

ಅವರು ಗುರುವಾರ ಕೋಟ ಹಂದೆ ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಉಡುಪಿ ಜಂಟಿಯಾಗಿ ಆಯೋಜಿಸಿದ ಕೋಟ ಸುದರ್ಶನ ಉರಾಳ ಕಲಾ ತಂಡದ ಭಿಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಲಾ ಪ್ರೋತ್ಸಾಹಕ ಹಂದಟ್ಟು ಶ್ರೀನಿವಾಸ ಭಟ್ ಕ್ಯಾಲಿಫೋರ್ನಿಯಾ ಮಾತನಾಡಿ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಂಡವರ ಸಂಸರ್ಗದಿಂದ ಕಲಾಸಕ್ತಿಯನ್ನು ಬೆಳೆಸಿಕೊಂಡೆ ಅದು ನಾನು ನೆಲೆಸಿದ ಕ್ಯಾಲಿಫೋರ್ನಿಯಾದಲ್ಲೂ ಮುಂದುವರಿದು ನನ್ನಿಂದಾದ ಪ್ರೋತ್ಸಾಹವನ್ನು ಯಕ್ಷಗಾನ ಕಲೆಗೆ ನೀಡಿದೆ. ಇಂದು ನನ್ನೂರಿನಲ್ಲು ಭಾಗವಹಿಸುವ ಯೋಗ ದೊರಕಿದೆ ಎಂದರು.

ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ ತಾರಾನಾಥ ಹೊಳ್ಳ ಶುಭಹಾರೈಸಿದರು ದೇವಳದ ಆಡಳಿತ ಮಂಡಳಿಯ ಅಮರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಸಿದ್ದಿವಿನಾಯಕ ವಿವಿದ್ದೊದ್ದೇಶ ಸಂಘದ ಅಧ್ಯಕ್ಷ ವೆಂಕಟರಮಣ ಸೋಮಯಾಜಿ ಸದಸ್ಯ ನಾಗೇಂದ್ರ ಐತಾಳ್ ಯಶಸ್ವಿ ಕಲಾ ವೃಂದ ಕೊಮೆಯ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ನಿರೂಪಿಸಿದರು.

ಬಳಿಕ ಸೃಜನ್ ಗಣೇಶ್ ಹೆಗಡೆ, ರಾಘವೇಂದ್ರ ಹೆಗಡೆ, ಕೋಟ ಶಿವಾನಂದ, ಸುಜಯೀಂದ್ರ ಹಂದೆ, ನಾಗರಾಜ ಕುಂಕಿಪಾಲ್, ಆದಿತ್ಯ ಭಟ್, ಸತೀಶ್ ಹಾಲಾಡಿ, ಉದಯ, ಗಣಪತಿ ಭಟ್, ಮಂಜುನಾಥ, ನವೀನ, ರಾಜು ಪೂಜಾರಿ ಮುಂತಾದ ಕಲಾವಿದ ಕೂಡುವಿಕೆಯಲ್ಲಿ ಬಿಷ್ಮೂÃತ್ಪತ್ತಿ ಯಕ್ಷಗಾನ ನಡೆಯಿತು.

ಕೋಟ ಹಂದೆ ದೇವಸ್ಥಾನದ ಪ್ರಾಂಗಣದಲ್ಲಿ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಉಡುಪಿ ಜಂ ಕಲಾ ಪ್ರೋತ್ಸಾಹಕ ಹಂದಟ್ಟು ಶ್ರೀನಿವಾಸ ಭಟ್ ಕ್ಯಾಲಿಫೋರ್ನಿಯಾ ಟಿಯಾಗಿ ಆಯೋಜಿಸಿದ ಕೋಟ ಸುದರ್ಶನ ಉರಾಳ ಕಲಾ ತಂಡದ ಭಿಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನವನ್ನು ಮಂಗಳೂರು ಯಕ್ಷದಾಮದ ಜನಾರ್ಧನ ಹಂದೆ ಉದ್ಘಾಟಿಸಿದರು. ಕಾರ್ಕಡದ ಅಧ್ಯಕ್ಷ ತಾರಾನಾಥ ಹೊಳ್ಳ, ದೇವಳದ ಆಡಳಿತ ಮಂಡಳಿಯ ಅಮರ ಹಂದೆ ಇದ್ದರು.

Leave a Reply

Your email address will not be published. Required fields are marked *