• Sat. Jul 27th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಂವಿಧಾನ ವಿರೋಧಿ ವರ್ತನೆ ತೋರಿದ ಆರೋಪ: ಉಪ್ಪುಂದ ಗ್ರಾಪಂ ಅಧ್ಯಕ್ಷರ ವಜಾಕ್ಕೆ ಆಗ್ರಹಿಸಿ ದಸಂಸ ಧರಣಿ

ByKiran Poojary

Feb 11, 2024

ಕುಂದಾಪುರ: ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂಜಾತಿವಾದಿ ಮನಸ್ಥಿತಿ ನಿವಾರಣೆಯಾಗದಿರುವುದು ಸಮಾಜಕ್ಕೆ ಕಳಂಕ. ಸಂವಿಧಾನಬದ್ಧ ವ್ಯವಸ್ಥೆಯಡಿ ಆಯ್ಕೆಯಾದ ಜನಪ್ರತಿನಿಧಿಗಳು ಜನ ಹಾಗೂ ದೀನದಲಿತರ ಪರ ವಾಗಿ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ದಲಿತ ದೌರ್ಜನ್ಯ ಜಾಗೃತಿ ಸಮಿತಿ ಉಡುಪಿ ಜಿಲ್ಲಾ ಸದಸ್ಯ ವಾಸುದೇವ ಮುದೂರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ಉಡುಪಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಬೈಂದೂರು, ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ತಾಲೂಕು ಸಮಿತಿ ಬೈಂದೂರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಸಮಿತಿ ಉಪ್ಪುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ವಿರೋಧಿ ಉಪ್ಪುಂದ ಗ್ರಾಪಂ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಗ್ರಾಪಂ ಎದುರು ಶುಕ್ರವಾರ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜನರಲ್ಲಿ ಸಂವಿಧಾನದ ಆಶಯ, ಹಕ್ಕೊತ್ತಾಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಸಂವಿಧಾನ ಜಾಗೃತಿ ಜಾಥಾ ಹಮ್ಮಿ ಕೊಳ್ಳಲಾಗಿತ್ತು. ಆದರೆ ಡಾ.ಬಿ.ಆ‌ರ್.ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದಡಿ ಗೆದ್ದು ಬಂದು ಗ್ರಾಪಂ ಅಧ್ಯಕ್ಷರಾಗಿರುವ ಉಪ್ಪುಂದ ಗ್ರಾಪಂ ಪ್ರಥಮ ಪ್ರಜೆ ಕಾಲಿಗೆ ಚಪ್ಪಲಿ ಧರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಅಗೌರವ ತೋರಿದ್ದಾರೆ. ಹೀಗೆಯೇ ಬೇರೆ ಬೇರೆ ವಿಚಾರದಲ್ಲಿ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ದುರ್ವ ರ್ತನೆ ತೋರುವ ಇವರ ದುರಾಡಳಿತದ ಸೊಕ್ಕನ್ನು ಮುರಿಯಲು ದಸಂಸ ಸಿದ್ಧವಿದೆ. ಮೊದಲು ಮನಸ್ಥಿತಿ ಸರಿಪಡಿಸಿಕೊಳ್ಳಿ ಇಲ್ಲವಾದರೆ ಕುರ್ಚಿ ಬಿಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುಗಳಾಗಬೇಕು. ಆದರೆ ಕೊಳಕು ರಾಜಕೀಯದ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುವ ಪ್ರವೃತ್ತಿಗಳುಅಪಾಯಕಾರಿಯಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಕೇವಲ ದಲಿತರಿಗೆ ಮಾತ್ರ ಸಂವಿಧಾನ ನೀಡಿಲ್ಲ. ಇಡೀ ದೇಶ, ವಿಶ್ವ ಮೆಚ್ಚುವ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ವಿಚಾರಧಾರೆ ಬಂದಾಗ ಜಾತಿ ಎಳೆದು ತರುವ ಕೀಳು ನಸ್ಥಿತಿ ನಿಲ್ಲಬೇಕು. ಇಂತಹ ವರ್ತನೆಯನ್ನು ಪಕ್ಷಾತೀತವಾಗಿ ನಿಲ್ಲಬೇಕು ಎಂದರು,

ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿ ಬೈಂದೂರು ಭಾರತಿ ತಾಪಂ ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ಹಿರಿಯ ದಲಿತ ಮುಖಂಡ ಮುಡೂರ ಮಾಸ್ಟರ್ ಅಂಬಾಗಿಲು, ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್, ದಸಂಸ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ ನಾಗೂರು, ಕುಂದಾಪುರ ತಾಲೂಕು ಸಮಿತಿಯ ಸುರೇಶ್ ಹಕ್ಕಾಡಿ, ಬೈಂದೂರು ತಾಲೂಕು ಸಮಿತಿ ಪ್ರಧಾನ ಸಂಚಾಲಕ ನಾಗರಾಜ ಉಪ್ಪುಂದ, ಸಂಘಟನಾ ಸಂಚಾಲಕ ಗೋವಿಂದ ಹಳಗೇರಿ, ಸತೀಶ್ ಯಡ್ತರೆ, ಕೋಶಾಧಿಕಾರಿ ಕೆ.ಭಾಸ್ಕರ್ ಕೆರ್ಗಾಲು, ಜ್ಯೋತಿಬಾಪುಲೆ ಅಂಬೇಡ್ಕರ್ ಸಂಘದ ಅಧ್ಯಕ್ಷೆ ನಾಗಮ್ಮ ದಸಂಸ ಮುಖಂಡರಾದ ರಾಮ ಮಯ್ಯಾಡಿ, ಸದಾನಂದ ಮೋವಾಡಿ, ರಾಘವೇಂದ್ರ ಶಿರೂರು, ಮಾಧವ ಬಾಕಾಡ, ಸುಂದರ ಬಾಬು ಹೊಸ್ಕೋಟೆ, ಶಿವರಾಜ ಬೈಂದೂರು, ಲಕ್ಷ್ಮಣ ಬೈಂದೂರು, ಶಿವರಾಮ ಹಳಗೇರಿ, ರಮೇಶ ನಾಡ, ರಂಗ ಯಡ್ತರೆ, ರಾಮ ಉಪ್ಪುಂದ, ಸಂದೀಪ ಮರವಂತೆ, ವಿನಯಾ ಮಾಸ್ತಿಕಟ್ಟೆ, ಭಾರತಿ ಶಿರೂರು, ನಾಗರತ್ನಾ ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *