ಕೋಟ: ಪ್ರತಿ ಮನೆಯ ಮಕ್ಕಳನ್ನು ಸಂಸ್ಕಾರಭರಿತ ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಜಾಗೃತೆ ವಹಿಸುವ ಅಗತ್ಯತೆ ಇದೆ ಎಂದು ಉದ್ಯಮಿ ಜನ್ನಾಡಿ ಶಂಕರ್ ಹೆಗ್ಡೆ ನುಡಿದರು.
ಕೋಟದ ಸೇವಾಸಂಗಮ ಶಿಶುಮಂದಿರ ಇದರ 37ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಆಧುನಿಕತೆಯಿಂದ ನೈಜ ಸಂಸ್ಕಾರಗಳು ಮರೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಅವರು ಶಿಶುಮಂದಿರಗಳ ಮೂಲಕ ನಮ್ಮ ಸಂಸ್ಕöÈತಿ ,ಸಂಸ್ಕಾರ ನೀಡುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರ್ಯಗಳು ನಡೆಯುತ್ತಿವೆ,ಓದು ಅಂತಿಮವಲ್ಲ ಬದಲಾಗಿ ಜೀವನ ಮೌಲ್ಯಗಳನ್ನು ತಿಳಿದುಕೊಂಡು ಅದರ ಜತೆಗೆ ಶಿಕ್ಷಣ ಪಡೆಯುವಂತ್ತಾಗಬೇಕು ಎಂದು ಕರೆಇತ್ತರು. ನಿಯೋಜಿತ ಭಾಷಣಕಾರಗಿ ಕುಂದಾಪುರ ಸೇವಾಸಂಗಮ ವಿಶ್ವಸ್ಥ ಮಂಡಳಿಯ ಸುರೇಶ್ ಹೆಬ್ಬಾರ್ ಭಾರತೀಯ ಪರಂಪರೆ ,ಸಂಸ್ಕಾರ ಆಚಾರ ವಿಚಾರಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಶಿಶುಮಂದಿರ ಮಹಾಪೋಷಕರಾದ ದೀಪಾ ಮಹೀಶಿ, ಭಾಮಾ ಅಮರ್, ಉದ್ಯಮಿ ಶಂಕರ್ ಹಗ್ಡೆ ಜನ್ನಾಡಿ ಇವರುಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸೇವಾಸಂಗಮ ಶಿಶುಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್ ವಹಿಸಿದರು. ಸಮಾಜಸೇವಕ ಶಂಕರ್ ಐತಾಳ್ ಉಪಸ್ಥಿತರಿದ್ದರು. ಬಹುಮಾನ ಪತ್ರವನ್ನು ಶಿಶು ಮಂದಿರದ ಮಾತೆಯರಾದ ಸುಮನ ಗೈದರು. ಶಿಶುಮಂದಿರ ಮಾತಾಜಿ ಸುಜಾತ ವರದಿ ವಾಚಿಸಿದರು.ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸ್ಥಾನೀಯ ಸಮಿತಿಯ ಸದಸ್ಯೆ ಭಾಗ್ಯೇಶ್ವರಿ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಸುಷ್ಮಾ ದಯಾನಂದ್ ಹೊಳ್ಳ ವಂದಿಸಿದರು.ಕಾರ್ಯಕ್ರಮದ ನಂತರ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.
ಕೋಟದ ಸೇವಾಸಂಗಮ ಶಿಶುಮಂದಿರ ಇದರ 37ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಉದ್ಯಮಿ ಶಂಕರ್ ಹಗ್ಡೆ ಜನ್ನಾಡಿ ಇವರನ್ನು ಸನ್ಮಾನಿಸಲಾಯಿತು. ಕುಂದಾಪುರ ಸೇವಾಸಂಗಮ ವಿಶ್ವಸ್ಥ ಮಂಡಳಿಯ ಸುರೇಶ್ ಹೆಬ್ಬಾರ್, ಸೇವಾಸಂಗಮ ಶಿಶುಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್, ಕೋಟ ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಇದ್ದರು.
Notice: Undefined variable: post in /home/hosakira/public_html/wp-content/themes/newses/inc/ansar/hooks/hook-single-page.php on line 180