ಕೋಟ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ, ಮತ್ತು ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸಾಸ್ತಾನ,ಹಾಗೂ ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಇವರ ಸಹಭಾಗಿತ್ವದಲ್ಲಿ (ಸಮಾನತೆಯೆಡೆಗೆ ನಮ್ಮ ನಡಿಗೆ) ಅರಿವಿನ ಪಯಣ ಕಾರ್ಯಕ್ರಮವು ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು
ಮಕ್ಕಳ ಪೋಷಕರು, ಮತ್ತು ಮಹಿಳಾ ಮಂಡಲದ ಸದಸ್ಯರ ಉಪಸ್ಥಿತಿಯಲ್ಲಿ ಹೆಣ್ಣಿನ ಮೇಲಾಗುವ ದೌರ್ಜನ್ಯಗಳು ಮತ್ತು ಅದನ್ನು ಎದುರಿಸಿ ಆತ್ಮಸ್ಥೆöÊರ್ಯದಿಂದ ಮುನ್ನಡೆಯುವ ಬಗೆಯನ್ನು,ಎಲ್ಲರ ಮನ ಮುಟ್ಟುವ ಹಾಗೆ ಹಾಡು,ಕಥೆ, ಕಿರು ನಾಟಕಗಳ ಮೂಲಕ ಪ್ರಚುರಪಡಿಸಲಾಯಿತು.
ಈ ಸಂದಭರ್ದದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಯ ರಾಜ್ಯ ಮಟ್ಟದ ಸದಸ್ಯೆ ವಾಣಿ ,ಉಡುಪಿ ವಿಭಾಗದ ಸದಸ್ಯರಾದ ಶಾಂತಿ ಪಿರೇರಾ ಮತ್ತು ಕಲಾವಿದರಾದ ಮಲ್ಲಿಕಾ ಮತ್ತು ಲಾವಣ್ಯ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಪೂಜಾರಿ ಸ್ವಾಗತಿಸಿ,ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ವಂದಿಸಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಜ್ಞಾನೇಶ್ವರಿ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ, ಮತ್ತು ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸಾಸ್ತಾನ ಇವರ ನೇತೃತ್ವದಲ್ಲಿ ಅರಿವಿನ ಪಯಣ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಯ ರಾಜ್ಯ ಮಟ್ಟದ ಸದಸ್ಯೆ ವಾಣಿ ಪಿಓಡಿ ಉದ್ಘಾಟಿಸಿದರು. ಉಡುಪಿ ವಿಭಾಗದ ಸದಸ್ಯರಾದ ಶಾಂತಿ ಪಿರೇರಾ ಮತ್ತು ಕಲಾವಿದರಾದ ಮಲ್ಲಿಕಾ ಮತ್ತು ಲಾವಣ್ಯ, ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಉಪಸ್ಥಿತರಿದ್ದರು.