• Sat. Feb 24th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಸ್ತಾನ ಗುಂಡ್ಮಿಚೆಲ್ಲೆಮಕ್ಕಿ ನಾಗಬನ ಇದರ 15ನೇ ವರ್ಷದ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮ
ಧಾರ್ಮಿಕ ಕೈಂಕರ್ಯದಲ್ಲಿ ಯುವ ಸಮುದಾಯ ಮುನ್ನಲೆಗೆ – ಸೂರ್ಯನಾರಾಯಣ ಗಾಣಿಗ

ByKiran Poojary

Feb 11, 2024

ಕೋಟ: ಧಾರ್ಮಿಕ ಕೈಂಕರ್ಯದಲ್ಲಿ ಯುವ ಸಮುದಾಯ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸೋಮ ಕ್ಷತ್ರೀಯ ಗಾಣಿಗ ಸಮಾಜ ಬಾರಕೂರು ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಹೇಳಿದರು.

ಸಾಸ್ತಾನ ಗುಂಡ್ಮಿಚೆಲ್ಲೆಮಕ್ಕಿ ನಾಗಬನ ಇದರ 15ನೇ ವರ್ಷದ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ ಪಾಶ್ಚಿಮಾತ್ಯ ಸಂಸ್ಕöÈತಿಯನ್ನು ದೇಗುಲಗಳ ಒಳಗೆ ಪ್ರವೇಶಿಸದಂತೆ ಜಾಗೃತಿ ವಹಿಸುವ ಜತೆಗೆ ಪೋಷಕರು ಮಕ್ಕಳನ್ನು

ಸುಸಂಸ್ಕöತರನ್ನಾಗಿಸಬೇಕು, ಭಾರತೀಯ ಸಂಸ್ಕçತಿ ವಿಶ್ವಮಟ್ಟದಲ್ಲಿ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಇಂತಹ ಸಂದರ್ಭಗಳಲ್ಲಿ ನಾವುಗಳು ನಮ್ಮ ಪರಂಪರೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತಿಗೆ ಸದಾ ಕೊಡುಗೆಗಳನ್ನು ನೀಡೋಣ ಎಂದರು.

ಈ ಸಂದರ್ಭದಲ್ಲಿ ದೇಗುಲ ನಿರ್ಮಾಣ ಕಾರ್ಯದಲ್ಲಿ ಸಹಕಾರವಿತ್ತ ಶಂಭು ಪೂಜಾರಿ,ನಾಗೇಶ್ ಪೂಜಾರಿ,ರಘು ಪೂಜಾರಿ ಇವರುಗಳನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಜಿ.ಆರ್ ಸುಧಾಕರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಮಣಿಪಾಲ ಸೆಂಚುರಿ ಫಾರ್ಮ ಮಾಲಿಕ ರಾಜಾರಾಮ್ ಭಟ್,ಪಂಚವರ್ಣ ಯುವಕ ಮಂಡಲ ಕೋಟ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಬ್ರಹ್ಮಾವರ ಪ್ರಣವ್ ಆಸ್ಪತ್ರೆ ಇದರ ವೈದ್ಯರಾದ ಡಾ.ರಂಜಿತ್ ಕುಮಾರ್,ಬ್ರಹ್ಮಾವರ ಆ ಆಶ್ರಯ ಹೋಟೆಲ್ ಮಾಲಿಕ ರಾಜಾರಾಮ್ ಶೆಟ್ಟಿ, ಸ್ಥಳೀಯ ಗುತ್ತಿಗೆದಾರ ಗಣಪಯ್ಯ ಆಚಾರ್,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ಭಾಸ್ಕರ ಬಂಗೇರ, ಬ್ರಹ್ಮಾವರ ಅಜಪುರ ಯಕ್ಷಗಾನ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಬಿರ್ತಿ, ಸಮಿತಿ ಕೋಶಾಧಿಕಾರಿ ಪರಮೇಶ್ವರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಗಣೇಶ್ ಜಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಸಂಘಟನಾಕಾರ್ಯದರ್ಶಿ ರಾಘವೇಂದ್ರ ಸೇರಿಗಾರ್ ವಂದಿಸಿದರು.

ಧಾರ್ಮಿಕ ಪೂಜಾ ಕಾರ್ಯಕ್ರಮ
ವರ್ಧಂತ್ಯುತ್ಸವದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ,ತೀಲ ಹೋಮ,ಪಂಚ ವಿಂಶತಿ ಕಲಶ ಸ್ಥಾಪನೆ, ಪ್ರಧಾನಹೋಮ, ಆಶ್ಲೇಷ ಬಲಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಬ್ರಾಹ್ಮಣವಟು ಆರಾಧನೆ, ವೇ.ಮೂ ಸುಬ್ರಹ್ಮಣ್ಯ ಮಧ್ಯಸ್ಥರಿಂದ ನಾಗ ಸಂದರ್ಶನ,ವಿವಿಧ ಭಜನಾ ತಂಡಗಳಿಂದ ಭಜನಾಕಾರ್ಯಕ್ರಮ, ಅನ್ನಸಂತರ್ಪಣೆ, ದೀಪೋತ್ಸವ ಕಾರ್ಯಕ್ರಮಗಳು ಜರಗಿದವು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಪ್ರಸನ್ನ ತುಂಗ ನೆರವೆರಿಸಿದರು.

ಸಾಸ್ತಾನ ಗುಂಡ್ಮಿಚೆಲ್ಲೆಮಕ್ಕಿ ನಾಗಬನ ಇದರ 15ನೇ ವರ್ಷದ ವರ್ಧಂತ್ಯುತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಗುಲ ನಿರ್ಮಾಣ ಕಾರ್ಯದಲ್ಲಿ ಸಹಕಾರವಿತ್ತ ಶಂಭು ಪೂಜಾರಿ,ನಾಗೇಶ್ ಪೂಜಾರಿ, ರಘು ಪೂಜಾರಿ ಇವರುಗಳನ್ನು ಗೌರವಿಸಲಾಯಿತು. ಮಣಿಪಾಲ ಸೆಂಚುರಿ ಫಾರ್ಮ ಮಾಲಿಕ ರಾಜಾರಾಮ್ ಭಟ್,ಪಂಚವರ್ಣ ಯುವಕ ಮಂಡಲ ಕೋಟ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಬ್ರಹ್ಮಾವರ ಪ್ರಣವ್ ಆಸ್ಪತ್ರೆ ಇದರ ವೈದ್ಯರಾದ ಡಾ.ರಂಜಿತ್ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *