ಸಾವಳಗಿ: ಜಾತಿ ಮತ ಪಂಥ ಬೇದ ಬಾವ ಇಲ್ಲದೆ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದಿರಿ, ದೇಶಭಕ್ತನಾಗಿ, ಸ್ವಾಭಿಮಾನಿಯಾಗಿ ಬದುಕುವಂತೆ ಶಿವಾಜಿ ತಾಯಿ ಜೀಜಾಬಾಯಿ ಹಾಗೂ ಆಧ್ಯಾತ್ಮಿಕ ಗುರು ಕೊಂಡದೇವ ಆತನಿಗೆ ಮಾರ್ಗದರ್ಶನ ನೀಡಿದ್ದರು. ಶೌರ್ಯ ಸಾಹಸಕ್ಕೆ ಹೆಸರಾಗಿರುವ ಶಿವಾಜಿಯ ಜೀವನಾದರ್ಶ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಶ್ರ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಅಂಬಾ ಭವಾನಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಸೋಮವಾರ ಧರ್ಮ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೀಜಾಬಾಯಿ ಶಿವಾಜಿಗೆ ನೀಡುತ್ತಿದ್ದ ಮಾದರಿಯಲ್ಲಿ ಸಂಸ್ಕೃತಿ, ಆಚಾರ ವಿಚಾರಗಳ ಶಿಕ್ಷಣವನ್ನು ಈಗಿನ ತಾಯಂದಿರು ಮಕ್ಕಳ ನೀಡಬೇಕು ಎಂದರು.
ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ ಮಾತನಾಡಿ ಅವರು ಶಿವಾಜಿ ಮಹಾರಾಜರು ಕೇವಲ ಮರಾಠಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಹಿಂದು ಸಮಾಜಕ್ಕೆ ಸೇರಿದವರು. ತಾಯಿ ಜೀಜಾಬಾಯಿ ಅವರ ಪ್ರೇರಣೆ ಪಡೆದ ಶಿವಾಜಿ ಮೂರು ಶತಮಾನಗಳ ಹಿಂದೆ ಸಾಮ್ರಾಜ್ಯವನ್ನು ಕಟ್ಟಿದರು ಎಂದು ಹೇಳಿದರು.
ನಂತರ ಬಿಜೆಪಿ ಯುವ ನಾಯಕ ಮೋಹನ ಜಾಧವ ಮಾತನಾಡಿ ರಾಷ್ಟ್ರ ಮತ್ತು ಧರ್ಮದ ಭಕ್ತಿಯ ಬೀಜಗಳನ್ನು ಬಿತ್ತುವ ಮೂಲಕ ಅವಳು ಅವನನ್ನು ಆದರ್ಶ ಆಡಳಿತಗಾರನನ್ನಾಗಿ ರೂಪಿಸಿದಳು. ಅವರು ಶಿವಾಜಿಗೆ ತಾಯಿ ಮಾತ್ರವಲ್ಲ, ಸ್ಫೂರ್ತಿಯ ಮೂಲವೂ ಆಗಿದ್ದರು. ತನಗೆ ಭವಾನಿ ಮತ್ತು ಮಹಾದೇವನ ಆಶೀರ್ವಾದವಿದೆ ಎಂಬ ಬಲವಾದ ನಂಬಿಕೆ ಅವಳಲ್ಲಿತ್ತು. ನಮ್ಮ ಪ್ರಯತ್ನಗಳು ದೇವರ ದಯೆಯಿಂದ ಮಾತ್ರ ನಮ್ಮ ಮನೆ ಬಾಗಿಲಿಗೆ ಯಶಸ್ಸನ್ನು ತರುತ್ತವೆ ಎಂದು ಅವಳು ಬಲವಾಗಿ ನಂಬಿದ್ದಳು. ರಾಜಮಾತಾ ಜೀಜಾಬಾಯಿಯ ರೂಪದಲ್ಲಿ ನಮ್ಮ ಮುಂದೆ ಮಾದರಿಯನ್ನು ಇಟ್ಟಿದ್ದಕ್ಕಾಗಿ ಇಡೀ ಹಿಂದೂ ಸಮುದಾಯವು ದೇವರಿಗೆ ಕೃತಜ್ಞರಾಗಿರಬೇಕು.
ಈ ಧರ್ಮ ಸಭೆ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಗ್ರಾಂ. ಪಂ ಅಧ್ಯಕ್ಷರು, ಸದಸ್ಯರು, ಪಿಕೆಪಿಎಸ ಅಧ್ಯಕ್ಷ ಉಪಾಧ್ಯಕ್ಷರ ಸದಸ್ಯರು, ಊರಿನ ಹಿರಿಯರು, ಜಾತ್ರಾ ಕಮಿಟಿಯವರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.