• Sat. Jul 27th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಅಂಕೋಲಾದಲ್ಲಿ   ಅಕ್ರಮ ದಂದೆ ಗೆ ಸಹಕರಿಸುವ ಸಮಾಜಘಾತುಕ ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಆಗ್ರಹಿಸಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕದಿಂದ ನೂತನ ಸಿಪಿಐಗೆ ಮನವಿ

ByKiran Poojary

Feb 19, 2024

ಅಂಕೋಲಾ-ಅಂಕೋಲಾ ತಾಲೂಕಿನಲ್ಲಿ  ಅನೇಕ ತರಹದ   ಅಕ್ರಮ ದಂದೆಗಳು ನಿರಂತರವಾಗಿ ನಡೆಯುತ್ತಿದ್ದು ಇದು ತಾಲೂಕಿನ  ಪ್ರಜ್ಞಾವಂತ ನಾಗರಿಕರಿಗೆ  ಗೊತ್ತಿರುವ ವಿಚಾರ… ಈ ಅಕ್ರಮ ದಂಧೆಗೆ ಪೊಲೀಸರು ಎಷ್ಟೇ   ಕಡಿವಾಣ ಹಾಕಲು ಪ್ರಯತ್ನಿಸಿದರು ಕೂಡ ಮತ್ತೆ ಮತ್ತೆ ಮಟ್ಕಾ ದಂತಹ ಅಕ್ರಮ ಚಟುವಟಿಕೆಗಳು  ಅಣಬೆಯಂತೆ ಚಿಗುರೊಡಗುತ್ತಿದೆ.  ಇದಕ್ಕೆ ಮುಖ್ಯವಾಗಿ  ರಾಜಕೀಯ ಪಕ್ಷದ ಪ್ರಭಾವಿ ರಾಜಕಾರಣಿಗಳ  ಒತ್ತಡಕ್ಕೆ ಒಳಗಾಗಿ   ಈ  ಅಕ್ರಮ ದಂಧೆ ಕೋರರ ಜೊತೆ  ಪರೋಕ್ಷವಾಗಿ  ಪೊಲೀಸರು ಕೂಡ   ಶಾಮಿಲ್ ಆಗಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿ  ಜನಸಾಮಾನ್ಯರಲ್ಲಿ ಕಾಡುತ್ತಿದೆ.

ಈ ಅಕ್ರಮ ದಂಧೆಗಳ  ಇಂಚಿಂಚು  ಮಾಹಿತಿಯನ್ನು  ಕಲೆಹಾಕಿದ ಭೂಪನೊಬ್ಬ ಅಸಲಿಗೆ ಯಾವುದೇ ಪತ್ರಿಕೆಯ ವರದಿಗಾರನಲ್ಲದಿದ್ದರೂ ಕೂಡ  ಪತ್ರಕರ್ತನ   ಸೋಗಿನಲ್ಲಿ  ಕೆಲವು  ಅಕ್ರಮ ದಂಧೆ ಮಾಡುವ ವ್ಯಕ್ತಿಗಳ  ಬಳಿ ಹಣ ವಸೂಲಿಗೆ ಇಳಿದ ಬಗ್ಗೆ   ಧ್ವನಿ ಸುರುಳಿಯೊಂದು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿರುವ ಬಗ್ಗೆ  ಅಂಕೋಲದ ಸ್ಥಳೀಯ  ಪತ್ರಿಕಾ ವರದಿಗಾರರೊಬ್ಬರು ತಮ್ಮ ಪತ್ರಿಕೆಯಲ್ಲಿ  ವರದಿಯನ್ನು ಬಿತ್ತರಿಸಿದರು ಎನ್ನಲಾಗಿದೆ.

ನಕಲಿ ಪತ್ರಕರ್ತರ ಹಾವಳಿಯ್ ವರದಿಯನ್ನು  ಗಂಭೀರವಾಗಿ ಪರಿಗಣಿಸಿದ ಮಾನವ ಹಕ್ಕುಗಳ ರಕ್ಷಣಾ ಪರಿಷತ್ತಿನ ಸದಸ್ಯರು   ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ  ನೂತನವಾಗಿ ಅಧಿಕಾರ ವಹಿಸಿಕೊಂಡ ಸಿಪಿಐ  ಶ್ರೀಕಾಂತ ತೌಟಗಿ. ಹಾಗೂ ಈ ಹಿಂದಿನ    ಪಿಎಸ್ಐ ಉದ್ದಪ್ಪ  ಸರ್ ರವರಿಗೆ ಹೂಗುಚ್ಛ ನೀಡಿ  ಶುಭಾಶಯವನ್ನು ಕೋರಿದರು . ನಂತರ ಮನವಿಯನ್ನು ನೀಡಿ  ಅಂಕೋಲದಲ್ಲಿ ಕೆಲವು ಸಮಾಜಘಾತುಕ ವ್ಯಕ್ತಿಗಳು ಯಾವುದೇ ಪತ್ರಿಕೆಯ ವರದಿಗಾರನಲ್ಲದಿದ್ದರೂ ಕೂಡ ತಾವೊಬ್ಬ  ದೊಡ್ಡ ರಾಜ್ಯಮಟ್ಟದ   ಪತ್ರಿಕೆಯ ಪತ್ರಕರ್ತ ಎಂದು ಹೇಳಿ ಅಕ್ರಮ ದಂದೆಕೊರರಿಂದ ಹಣ ವಸೂಲಿಗೆ ಇಳಿದ ಆಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಬಗ್ಗೆ . ಅಂಕೋಲದ  ಸ್ಥಳೀಯ  ಪತ್ರಿಕೆ ವರದಿಗಾರರೊಬ್ಬರು 16/02/2024 ರಂದು ತಮ್ಮ ಪತ್ರಿಕೆಯಲ್ಲಿ ಬಿತ್ತರಿಸಿದ   ವರದಿಯನ್ನು ಆದರಿಸಿ ಸದರಿ ವರದಿಯಲ್ಲಿ ಉಲ್ಲೇಖಿಸಿದಂತೆ ಆಡಿಯೋ ಸಂಭಾಷಣೆಯನ್ನು  ಆಧಾರವಾಗಿಟ್ಟುಕೊಂಡು  ಸಂಭಾಷಣೆಯಲ್ಲಿ ತೊಡಗಿದ್ದ   ಅಕ್ರಮದಂದೆಕೋರ ಹಾಗೂ ಆ ನಕಲಿ ಪತ್ರಕರ್ತರು ಯಾರು ಎಂದು  ಕಂಡುಹಿಡಿದು  ಸದ್ರಿ ವ್ಯಕ್ತಿಗಳ ಮೇಲೆ  ಸೂಕ್ತ  ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ. ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ  ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ತಿನ
ಜಿಲ್ಲಾ ಉಪಾಧ್ಯಕ್ಷ  ಕಿರಣ್ ಗಾಂವಕರ್,ತಾಲೂಕ  ಅಧ್ಯಕ್ಷರು ಸುರಜ ನಾಯ್ಕ್,ಮಹಿಳಾ ಉಪಾಧ್ಯಕ್ಷರು. ಸುಪ್ರಿಯ ನಾಯ್ಕ. ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ಐಶ್ವರ್ಯ ನಾಯ್ಕ್, ದಿಲೀಪ್ ನಾಯ್ಕ,. ಸುಭಾಷ ನಾಯ್ಕ. ಮಹೇಶ್ ಗೌಡ., ರವಿ ನಾಯ್ಕ್, ಪೇಟು ಗೌಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *