• Sun. May 12th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೃಷಿ ಮಾಡುವ ಇಚ್ಛಾಶಕ್ತಿ  ಶ್ರೇಷ್ಠವಾದದ್ದು – ಕಾರ್ಕಡ ರಾಜು ಪೂಜಾರಿ
ಪಂಚವರ್ಣ ಸಂಸ್ಥೆಯ ರೈತರೆಡೆಗೆ ನಮ್ಮನಡಿಗೆ 33ನೇ ಮಾಲಿಕೆ

ByKiran Poojary

Feb 28, 2024

ಕೋಟ: ಕೃಷಿ ಮಾಡುವ ಇಚ್ಛಾಶಕ್ತಿ  ಶ್ರೇಷ್ಠತೆ ಹೊಂದುತ್ತದೆ ಅಂತಹ ಕೃಷಿಕರಿಗೆ ಸ್ವತಃ ಭೂಮಿ ಬೇಕಾಗಿಲ್ಲ ಗೇಣಿ ಭೂಮಿಯ ಮೂಲಕವು ಕೃಷಿ ಕಾಯಕ ಮಾಡುತ್ತಾರೆ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ ,ಪ್ರಸ್ತುತ ಸದಸ್ಯ ರಾಜು ಪೂಜಾರಿ ಕಾರ್ಕಡ ನುಡಿದರು.

ಕೋಟ ಪಂಚವರ್ಣ ಯುವಕ ಮಂಡಲ ,ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 33ನೇ ಮಾಲಿಕೆ ಕಾರ್ಯಕ್ರಮ ಸಾಲಿಗ್ರಾಮದ ಕಾರ್ಕಡ ಉಮೇಶ್ ಪೂಜಾರಿ ಇವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಉಮೇಶ್ ಪೂಜಾರಿ ಎನ್ನುವ ಯುವ ಕೃಷಿಕ ಇತರರಿಗೆ ಮಾದರಿದಾಯಕರಾಗಿ ಕೃಷಿ ಕ್ಷೇತ್ರದಲ್ಲಿ ತನ್ನದೆ ಆದ ಸಾಧನೆ ಮಾಡುತ್ತಿದ್ದಾರೆ.
ಕರಾವಳಿ ಭಾಗದಲ್ಲಿ ತುಂಡು ಕೃಷಿ ಭೂಮಿ ಹೆಚ್ಚಾಗಿದ್ದು ಅದರಲ್ಲಿ ಕೃಷಿ ಕಾಯಕ ಕ್ಲಿಷ್ಟಕರ ಎಂದರಲ್ಲದೆ ಕೃಷಿ ಅವಲಂಬಿತ ಈ ಭಾರತದಲ್ಲಿ ಸಾವಯವ ಕೃಷಿ ಪದ್ಧತಿ ಅನಿವಾರ್ಯ ಹಾಗೂ ಅನುಷ್ಠಾನಕ್ಕೆ ಸರಕಾರ ಕಾರ್ಯಕ್ರಮ ರೂಪಿಸಲಿ ಅದರ ಜತೆಗೆ ಕೃಷಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಿ ಎಂದು ಪಂಚವರ್ಣ ಸಂಸ್ಥೆ ಈ ಕಾರ್ಯಕ್ರಮರೈತರಿಗೆ ಪ್ರೋತ್ಸಾಕರವಾಗಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಈ ವೇಳೆ ಯುವ ಕೃಷಿಕ ಉಮೇಶ್ ಪೂಜಾರಿ ಪತ್ನಿ ಪೂರ್ಣಿಮಾ ಇವರುಗಳಿಗೆ ಕೃಷಿ ಪರಿಕರವನ್ನಿತ್ತು ಗೌರವಿಸಲಾಯಿತು.

ಅಲ್ಲದೆ ವಿಶೇಷವಾಗಿ ರಕ್ತಚಂದನ ಗಿಡ ನೆಟ್ಟು ರೈತರೆಡೆಗೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಾಯಿತು.
ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ರೈತರಿಗೆ ಕೃಷಿ ಮಾಹಿತಿ ಸಮಗ್ರ ಕೃಷಿ ನೀತಿಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮದ ಸಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ,ನ್ಯೂ ಕಾರ್ಕಡ ಶಾಲೆಯ ಶಿಕ್ಷಕ ಸತ್ಯನಾರಾಯಣ, ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ,ಐರೋಡಿ ಪರಿಸರದ ಹಿರಿಯ ಕೃಷಿಕ ಸಂಜೀವ ಪೂಜಾರಿ,ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಶೀನ.ಕೆ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಚಿತ್ರಪಾಡಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ರಮೇಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರೆ,ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

ಕೋಟ ಪಂಚವರ್ಣ ಯುವಕ ಮಂಡಲ ,ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 33ನೇ ಮಾಲಿಕೆ ಕಾರ್ಯಕ್ರಮ ಸಾಲಿಗ್ರಾಮದ ಕಾರ್ಕಡ ಉಮೇಶ್ ಪೂಜಾರಿ ದಂಪತಿಗಳನ್ನು  ಗೌರವಿಸಲಾಯಿತು. ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ , ಪ್ರಸ್ತುತ ಸದಸ್ಯ ರಾಜು ಪೂಜಾರಿ ಕಾರ್ಕಡ, ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಸಾಲಿಗ್ರಾಮದ ಸಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ,ನ್ಯೂ ಕಾರ್ಕಡ ಶಾಲೆಯ ಶಿಕ್ಷಕ ಸತ್ಯನಾರಾಯಣ, ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *