• Mon. May 13th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

55.65 ಲಕ್ಷ ರೂಪಾಯಿ ಮೊತ್ತದ ಪಡುಬಿದ್ರಿ ಉಪ ಅಂಚೆ ಕಚೇರಿ ನೂತನ ಕಟ್ಟಡ – ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ByKiran Poojary

Feb 28, 2024

ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 55.65 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ “ಪಡುಬಿದ್ರಿ ಉಪ ಅಂಚೆ ಕಚೇರಿ ನೂತನ ಕಟ್ಟಡ”ದ ಉದ್ಘಾಟನೆಯನ್ನು ಇಂದು ದಿನಾಂಕ 28-02-2024 ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಅಹಾರ ಸಂಸ್ಕರಣ ಉದ್ಯಮ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ಶಾಸಕರು ಮಾತನಾಡಿ ಅಂಚೆ ಇಲಾಖೆ ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ. ಪಡುಬಿದ್ರಿ ಉಪ ಅಂಚೆ ಕಚೇರಿ ಜನಸಾಮಾನ್ಯರ ಕಚೇರಿಯಾಗಲಿ ಎಂದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ಟಿ.ಎಸ್ ಅಶ್ವತ್ಥನಾರಾಯಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *