• Tue. May 7th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮಣೂರು ಶ್ರೀ ಹೆರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರಾ ಸಡಗರ, ಸಾಂಸ್ಕ್ರತಿಕ ಪರ್ವಕ್ಕೆ ಚಾಲನೆ

ByKiran Poojary

Apr 21, 2024

ಮಣೂರು ದೇಗುಲ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ – ಎಂ.ಎನ್ ಮಧ್ಯಸ್ಥ
ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲ ಕಾರಣಿಕ ಕ್ಷೇತ್ರವಾಗಿ ಭಕ್ತರನ್ನು ಕೈ ಬಿಸಿ ಕರೆಯುವ ಕ್ಷೇತ್ರವಾಗಿದೆ.ಎಂದು ಯಕ್ಷ ಗುರು ಎಂ.ಎನ್ ಮಧ್ಯಸ್ಥ. ಹೇಳಿದರು.

ಶನಿವಾರ ಕೋಟದ ಮಣೂರು ಶ್ರೀ ಹೆರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರಾ ಸಡಗರ ಸಾಂಸ್ಕ್ರತಿಕ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ  ಸಂಕಷ್ಟ ಪರಿಹರಿಸುವ ಹರನಾಗಿ ಭಕ್ತರನ್ನು ಸಲಹುತ್ತಿದ್ದಾನೆ. ಉಡುಪಿ ಜಿಲ್ಲೆಯ ಅಭಿವೃದ್ಧಿಹೊಂದಿದ ದೇಗುಲಗಳ ಸಾಲಿಗೆ ನಿಂತಿದೆ, ವರ್ಷದಿಂದ ವರ್ಷಕ್ಕೆ ದೇಗುಲದಲ್ಲಿ ಭಕ್ತರ ಸಂಖ್ಯೆ ಏರುಗತಿಯನ್ನು ಕಾಣುತ್ತಿದೆ, ಅಲ್ಲದೆ ಜಾತ್ರೆಗೆ  ಹೊಸ ಮೆರುಗು ಹೆಚ್ಚಿಸುತ್ತಿದೆ.ಯಾವುದೇ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾದರೆ ಅಲ್ಲಿನ ಆಡಳಿತ ಮಂಡಳಿಯ ಕಾರ್ಯವೈಕರಿಯ ಮೇಲೆ ನಿಲ್ಲುತ್ತದೆ ಈ ದಿಸೆಯಲ್ಲಿ ಸತೀಶ್ ಕುಂದರ್ ಮತ್ತವರ ತಂಡ ನೇತೃತ್ವದಲ್ಲಿ ದೇಗುಲ ಉನ್ನತಿ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮವನ್ನು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಇದೇ ವೇಳೆ ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ  ಭಾರತೀಯ ದೂರಸಂಪರ್ಕ ಕೇಂದ್ರ ಇದರ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ದೇಗುಲದ ಮಾಜಿ ಸದಸ್ಯ ರಮೇಶ್ ಪಡಿಯಾರ್, ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ, ರಾಜೇಂದ್ರ ಉರಾಳ, ವಿಜಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ನಾಗರತ್ನ ಹೇರ್ಳೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು ಇವರಿಂದ ಶಾಸ್ತಿçÃಯ ಸಂಗೀತ ನೃತ್ಯ ವೈಭವ,ಸ್ನೇಹಕೂಟ ಮಣೂರು ಇವರಿಂದ ಸಾಂಸ್ಕ್ರತಿಕ ಸಿಂಚನ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮಣೂರು ಇವರಿಂದ ವೀರಮಣಿ, ಶಮಂತಕಮ ಯಕ್ಷಗಾನ ಪ್ರದರ್ಶನಗೊಂಡಿತು.

ಕೋಟದ ಮಣೂರು ಶ್ರೀ ಹೆರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರಾ ಸಡಗರ ಸಾಂಸ್ಕ್ರತಿಕ ಪರ್ವ ಕಾರ್ಯಕ್ರಮದಲ್ಲಿ ಯಕ್ಷಗುರು ಸೀತಾರಾಮ ಶೆಟ್ಟಿ ಕೊಯ್ಕೂರು ಇವರನ್ನು ಸನ್ಮಾನಿಸಲಾಯಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಭಾರತೀಯ ದೂರಸಂಪರ್ಕ ಕೇಂದ್ರ ಇದರ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ,ದೇಗುಲದ ಮಾಜಿ ಸದಸ್ಯ ರಮೇಶ್ ಪಡಿಯಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *