• Tue. May 7th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಇಂಡಿಕಾ ಕಲಾ ಬಳಗ ನೇತೃತ್ವದಲ್ಲಿ ಬೇಸಿಗೆ ಶಿಬಿರ ಚಿತ್ತಾರ ಚಿರಣ್ಣರ ಚಿಲಿಪಿಲಿ ಸಮಾರೋಪ
ಪೋಷಕರೇ ಮಕ್ಕಳಿಗೆ ಶಿಬಿರಗಳಲ್ಲದೆ ನೈಜ ಸಂಸ್ಕಾರ ನೀಡಿ – ಭಾರತಿ ವಿ.ಮಯ್ಯ

ByKiran Poojary

Apr 21, 2024

ಕೋಟ: ಮಕ್ಕಳಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಪೋಷಕರು ಮನೆಯಲ್ಲಿ ನೈಜ ಸಂಸ್ಕಾರ ನೀಡುವಂತ್ತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮಣೂರು ಭಾರತಿ ವಿ ಮಯ್ಯ ಹೇಳಿದರು.

ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ,ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ,ಕೋಟ ಗ್ರಾಮಪಂಚಾಯತ್ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಮೂರುದಿನಗಳ ಬೇಸಿಗೆ ಶಿಬಿರ ಚಿತ್ತಾರ ಚಿರಣ್ಣರ ಚಿಲಿಪಿಲಿ -2024 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರಸ್ತುತ ಮಕ್ಕಳ ಜೀವನ ಕ್ರಮದಲ್ಲಿ  ವ್ಯತ್ಯಾಸಗಳನ್ನು ನಾವುಗಳು ಕಾಣುತ್ತಿದ್ದೇವೆ ಇದಕ್ಕೆ ಒಂದು ಕಾರಣ ಪೋಷಕರೆ ಮಕ್ಕಳಿಗೆ ಬೇಕಾದದ್ದು ನೀಡಿ ಅವರ ಬಗ್ಗೆ ಮೃದು ದೋರಣೆ ತಳೆಯುತ್ತಿದ್ದೇವೆ ಇದು ನಾವುಗಳು ಮಾಡುವ ಬಹುದೊಡ್ಡ ಅಪರಾಧವಾಗಿದೆ.ಮಕ್ಕಳಿಗೆ ಹಿಂದಿನ ದಿನಗಳಲ್ಲಿ ನೀಡುವ ಸಂಸ್ಕಾರವನ್ನು ನೀಡಿ ಆಗ ನಿಮ್ಮನ್ನು ಸದಾ ಕಾಯುವ ಕಾರ್ಯ ಮಾಡುತ್ತವೆ ಇಲ್ಲವಾದಲ್ಲಿ ನಮ್ಮೆಲ್ಲ ಹಿರಿಯರಿಗೆ ಅನಾಥಾಶ್ರಮದ ಕದ ತಟ್ಟಿಸುವುದರಲ್ಲಿಅನುಮಾನಗಳೇ ಇಲ್ಲ ಈ ದಿಸೆಯಲ್ಲಿ ಬೇಸಿಗೆ ಶಿಬಿರಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಇಲ್ಲವಾದಲ್ಲಿ ರಜಾದಿನಗಳಲ್ಲಿ ಮೊಬೈಲ್ ವ್ಯಾಮೂಹ ಹಾಗೇ ಕೆಟ್ಟ ಚಿಂತನೆಗಳಲ್ಲಿ ಕಾಲಕಳೆಯುವಂತ್ತಾಗುತ್ತದೆ ಇಂಥಹ ಶಿಬಿರಗಳನ್ನು ಆಯೋಜಿಸಿದ ಸಂಘಟನೆಗಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ವೇಳೆ ಬೇಸಿಗೆ ಶಿಬಿರ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳಾ ಮತ್ತು ಮಕ್ಕಳ ಹೋರಾಟಗಾರ್ತಿ ತಿಲೋತ್ತಮೆ ನಾಯಕ್ ವಿಶೇಷವಾಗಿ ಪೋಷಕರಿಗೆ ಮಕ್ಕಳಿಗೆ ಉಪಯುಕ್ತ ಮಾಹಿತಿ ಯನ್ನು ನೀಡಿದರು. ಮೂರು ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ  ಕುಮಾರ್ ವಕ್ವಾಡಿ, ಜಯಲಕ್ಷ್ಮೀ ಕೋಟತಟ್ಟು ಇವರುಗಳನ್ನು ಅಭಿನಂದಿಸಲಾಯಿತು. ಅದೇ ರೀತಿ ಗೀತಾನಂದ ಫೌಂಡೇಶನ್ ಮಕ್ಕಳಿಗೆ ಸರ್ಟಿಫಿಕೇಟ್ ಕಾಡ್9 ಹಾಗೂ ಬಹುಮಾನವನ್ನು ಹಾಗೂ ಡ್ರಾಯಿಂಗ್ ಪರಿಕರ ನೀಡಿತು.

ಸಭೆಯ ಅಧ್ಯಕ್ಷತೆಯನ್ನು ಇಂಡಿಕಾ ಕಲಾ ಬಳಗದ ಸಂತೋಷ್ ಕುಮಾರ್ ಕೋಟ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ, ಉಡುಪಿ ಪೋಲಿಸ್ ಇಲಾಖೆಯ ರವಿ ಕುಮಾರ್, ಪಂಚವರ್ಣ ಯುವಕ ಮಂಡಲದ ಸದಸ್ಯ ಮಹೇಶ್ ಕುಮಾರ್ ಬೆಳಗಾವಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರೆ, ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು. ಶಿಬಿರದಲ್ಲಿ ಒಟ್ಡು ಮೂವತ್ತಕ್ಕೂ ಅಧಿಕ ಪುಟಾಣಿಗಳು ಭಾಗಯಾದರು.

ಇಂಡಿಕಾ ಕಲಾ ಬಳಗ ಮಣೂರು ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಕೋಟ ಗ್ರಾಮಪಂಚಾಯತ್ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಮೂರುದಿನಗಳ ಬೇಸಿಗೆ ಶಿಬಿರ ಚಿತ್ತಾರ ಚಿರಣ್ಣರ ಚಿಲಿಪಿಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ  ಕುಮಾರ್ ವಕ್ವಾಡಿ,ಜಯಲಕ್ಷ್ಮೀ ಕೋಟತಟ್ಟು ಇವರುಗಳನ್ನು ಅಭಿನಂದಿಸಲಾಯಿತು. ಸಾಮಾಜಿಕ ಕಾರ್ಯಕರ್ತೆ ಮಣೂರು ಭಾರತಿ ವಿ ಮಯ್ಯ ಇಂಡಿಕಾ ಕಲಾ ಬಳಗದ ಸಂತೋಷ್ ಕುಮಾರ್ ಕೋಟ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *