• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಂಘಸಂಸ್ಥೆಗಳಿಂದ ಜಾತ್ರೋತ್ಸವಕ್ಕೆ ಹೊಸ ಮೆರುಗು- ಎಂ.ವಿ ಮಯ್ಯ
ಮಣೂರು ಫ್ರೆಂಡ್ಸ್ ವಾರ್ಷಿಕೋತ್ಸವದಲ್ಲಿ ಹೇಳಿಕೆ

ByKiran Poojary

Apr 22, 2024

ಕೋಟ: ಸ್ಥಳೀಯ ದೇಗುಲಗಳ ಜಾತ್ರೋತ್ಸವದಲ್ಲಿ ಸಂಘಸAಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದು ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಅಭಿಪ್ರಾಯಪಟ್ಟರು.

ಭಾನುವಾರ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೆ ದಿನದ ಸಾಂಸ್ಕöÈತಿಕ ಪರ್ವದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ೨೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘಸAಸ್ಥೆಗಳು ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಆ ಮೂಲಕ ಗ್ರಾಮ ಗ್ರಾಮಗಳ ಅಭಿವೃದ್ಧಿ ಸ್ವಚ್ಛತೆ ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಒತ್ತುನೀಡಬೇಕು,ಮಣೂರು ಫ್ರೆಂಡ್ಸ್ ಸಾಮಾಜಿಕವಾಗಿ ಧಾರ್ಮಿಕವಾಗಿ ತನ್ನದೆ ಆದ ವೈಶಿಷ್ಟ÷್ಯತೆಯನ್ನು ಹೊಂದಿದೆ.ಮಣೂರು ದೇಗುಲದ ಜಾತ್ರೆಗೆ ಹೊಸ ಬಣ್ಣ ಬಡಿದು ಒಂದಿಷ್ಟು ಸಾಧಕರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದೆ ಇದು ಶ್ಲಾಘನಾರ್ಹ ಕಾರ್ಯ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಲಿ ಎಂದು ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್ ಗೌರವ ಸಲಹೆಗಾರ ಎಂ.ಸುಬ್ರಾಯ ಆಚಾರ್ ವಹಿಸಿದ್ದರು.
ಇದೇ ವೇಳೆ ಸ್ಥಳೀಯ ಸಾಧಕ ಹರ್ತಟ್ಟು ನಾರಾಯಣ ಆಚಾರ್,ದೇಗುಲದ ಪರಿಚಾರಕರಾದ ಬಾಬಿ ದೇವಾಡಿಗ, ಕಮಲ ದೇವಾಡಿಗ,ಗಂಗಾ ದೇವಾಡಿಗ ,ಚಿತ್ರಕಲಾವಿದ ನಾಗೇಶ್ ಆಚಾರ್,ಮಾಸ್ಟರ್ ಅಥ್ಲೇಟಿಕ್ ಪಟು ದಿನೇಶ್ ಗಾಣಿಗ ಕೋಟ,ಶೈಕ್ಷಣಿಕ ಸಾಧಕಿ ನಂದಿತಾ ಪೈ,ಕುಸ್ತಿಪಟು ಪ್ರೇರಣಾ ದಿನಕರ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಅಶಕ್ತ ವಿಶೇಷಚೇತನರಿಗೆ ಸಹಾಯಹಸ್ತ ನೀಡಲಾಯಿತು.

ಇತ್ತೀಚಿಗೆ ಅಗಲಿದ ದೇಗುಲದ ಪರಿಚಾರಕಿ ಕಾವೇರಿ ದೇವಾಡಿಗ,ಸ್ಥಳೀಯ ಕ್ರಿಕೆಟ್ ಪಟು ಸಾಗರ್ ಪೂಜಾರಿ ಇವರುಗಳಿಗೆ ಸಂತಾಪ ಸೂಚಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾದ ಸತೀಶ್ ಹೆಚ್ ಕುಂದರ್,ಉದ್ಯಮಿ ಸಂತೋಷ್ ಸುವರ್ಣ, ಉಮೇಶ್ ಆಚಾರ್, ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್, ಅಧ್ಯಕ್ಷ ರಾಘವೇಂದ್ರ ಆಚಾರ್ , ಫ್ರೆಂಡ್ಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸದಸ್ಯ ಅಜಿತ್ ಆಚಾರ್ ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿದರು. ಮಾಜಿ ಅಧ್ಯಕ್ಷ ಸುಧಾಕರ್ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ನಿರೂಪಕಿ ಸುಜಾತ ಬಾಯರಿ ನಿರೂಪಿಸಿದರು.ಮಾಜಿ ಅಧ್ಯಕ್ಷ ದಿನೇಶ್ ಆಚಾರ್ ಸಹಕರಿಸಿದರು.

ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೆ ದಿನದ ಸಾಂಸ್ಕöತಿಕ ಪರ್ವದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ೨೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಸ್ಥಳೀಯ ಸಾಧಕ ನಾರಾಯಣ ಆಚಾರ್,ದೇಗುಲದ ಪರಿಚಾರಕರಾದ ಬಾಬಿ ದೇವಾಡಿಗ, ಕಮಲ ದೇವಾಡಿಗ, ಗಂಗಾ ದೇವಾಡಿಗ , ಚಿತ್ರಕಲಾವಿದ ನಾಗೇಶ್ ಆಚಾರ್, ಮಾಸ್ಟರ್ ಅಥ್ಲೇಟಿಕ್ ಪಟು ದಿನೇಶ್ ಗಾಣಿಗ ಕೋಟ , ಶೈಕ್ಷಣಿಕ ಸಾಧಕಿ ನಂದಿತಾ ಪೈ, ಕುಸ್ತಿಪಟು ಪ್ರೇರಣಾ ದಿನಕರ್  ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾದ ಸತೀಶ್ ಹೆಚ್ ಕುಂದರ್, ಉದ್ಯಮಿ ಸಂತೋಷ್ ಸುವರ್ಣ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *