• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಗೃಹಜ್ಯೋತಿ : ಉಚಿತ ವಿದ್ಯುತ್ ಗೆ ಸಲ್ಲಿಸಿದ ಅರ್ಜಿ ಸ್ಟೇಟಸ್ ಚೆಕ್ ಮಾಡುವ ವಿಧಾನ..! ತಪ್ಪದೇ ಈಗಲೇ ಸ್ಟೇಟಸ್ ಚೆಕ್ ಮಾಡಿ

ByKiran Poojary

Jul 7, 2023

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಿಮ್ಮ ಗ್ರಹ ಜ್ಯೋತಿ ಅರ್ಜಿಯ ಸ್ಥಿತಿಯನ್ನು ಯಾವ ರೀತಿ ಚೆಕ್ ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿಕೊಡಲಾಗುತ್ತದೆ. ಒಂದು ವೇಳೆ ನಿಮ್ಮ ಅರ್ಜಿ Submit ಆಗಿರದೆ ಇದ್ದರೆ ಮತ್ತೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಗೃಹಜ್ಯೋತಿ ಯೋಜನೆಗೆ ನೀವು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ ಪ್ರತಿಯೊಬ್ಬ ಗ್ರಾಹಕರು ತಪ್ಪದೆ ತಮ್ಮ ತಮ್ಮ ಅರ್ಜಿಯ ಸ್ಥಿತಿಯನ್ನು (status) ಮಾಡಿಕೊಳ್ಳುವುದು ಕಡ್ಡಾಯ. ಅದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

ಗೃಹಜ್ಯೋತಿ ಯೋಜನೆಗೆ ಈಗಾಗಲೇ 90 ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಉಚಿತ ವಿದ್ಯುತ್‌ ಸೌಲಭ್ಯ ಬೇಕು ಎಂದರೆ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಯಾರು ಅರ್ಜಿ ಸಲ್ಲಿಕೆ ಮಾಡಿರುವುದಿಲ್ಲವೋ ಅವರಿಗೆ ಆಗಸ್ಟ್‌ನಲ್ಲಿ ಪೂರ್ಣ ಬಿಲ್‌ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ. ಆಗಸ್ಟ್ ತಿಂಗಳಿನಿಂದಲೇ ನಿನ್ನ ಮನೆಯ ವಿದ್ಯುತ್ ಬಿಲ್ ಶೂನ್ಯ ಬರಬೇಕೆಂದರೆ ಜುಲೈ 25ರ ಒಳಗೆ ನೀವು ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ನಿಗದಿಪಡಿಸದಿದ್ದರೂ ಕೂಡ ಶೀಘ್ರವಾಗಿ ಅರ್ಜಿಯನ್ನು ಸಲ್ಲಿಸುವುದು ಮುಖ್ಯವಾಗಿದೆ ಏಕೆಂದರೆ, ನೀವು ಎಷ್ಟು ಬೇಗ ಅರ್ಜಿಯನ್ನು ಸಲ್ಲಿಸುತ್ತಿರೋ, ಅಷ್ಟು ಬೇಗನೆ ನೀವು ಈ ಯೋಜನೆಯ ಫಲಾನುಭವಿಗಳಾಗುತ್ತೀರಾ. ಜೂನ್ 25ರೊಳಗೆ ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಜನರಿಗೆ ಜುಲೈ ಒಂದರಿಂದ ಶೂನ್ಯ ವಿದ್ಯುತ್ ಬಿಲ್ ದೊರೆಯುತ್ತದೆ. ಹಾಗಾಗಿ ಇನ್ನೂ ನೀವೇನಾದರೂ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಲ್ಲದಿದ್ದರೆ, ತಕ್ಷಣವೇ ಅರ್ಜಿಯನ್ನು ಸಲ್ಲಿಸಿ.

ಗೃಹ ಜ್ಯೋತಿ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳುವ ವಿಧಾನ :

ಹಂತ 1 : ಮೊದಲನೆಯದಾಗಿ ಈ ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://sevasindhugs.karnataka.gov.in/

ಹಂತ 2: ಮೇಲೆ ಕಾಣಿಸುತ್ತಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ” ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ” ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ

ಹಂತ 3: ನಂತರ ನಿಮ್ಮ ESCOM select ಮಾಡಿ,ನಿಮ್ಮ  ವಿದ್ಯುತ್ ಬಿಲ್ ನ Account ID type ಮಾಡಿ,Check status ಮೇಲೆ ಕ್ಲಿಕ್ ಮಾಡಿ.

ಹಂತ 4: ಈ ಕೆಳಗಿನಂತೆ “Your application for Gruhajyothi scheme is received and sent to ESCOM for processing” ಎಂದು ತೋರಿಸಿದರೆ,ನಿಮ್ಮ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿದೆ ಎಂದು ಅರ್ಥ

ಈ ರೀತಿಯಾಗಿ ತೋರಿಸದಿದ್ದರೆ, ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ

Screenshot 2023 07 07 06 06 55 28 40deb401b9ffe8e1df2f1cc5ba480b12

Leave a Reply

Your email address will not be published. Required fields are marked *