• Sat. May 4th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಭಾರತದ ಪ್ರತಿಷ್ಠಿತ JNU, Delhi ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಡಾ.ರಮೇಶ್ ಸಾಲ್ಯಾನ್

ByKiran Poojary

Jul 20, 2023

ಮಂಗಳೂರು : ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ, ಸಹಾಯಕ ಪ್ರಾಧ್ಯಾಪಕ, ಕಾನೂನು ಕೋಶದ ಉಪಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ| ರಮೇಶ್ ಸಾಲ್ಯಾನ್ ಅವರು ಭಾರತದ ಪ್ರತಿಷ್ಠಿತ JNU, Delhi ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಆಯ್ಕೆಯಾಗಿದ್ದಾರೆ. ನಮ್ಮ ಸಮಾಜದಿಂದ ಪ್ರತಿಷ್ಠಿತ ಈ ಅವಕಾಶ ಪಡೆದ ಪ್ರಥಮ ವ್ಯಕ್ತಿ ಡಾ| ರಮೇಶ್ ಸಾಲ್ಯಾನ್ ಎಂಬುದು ಸಮಾಜದ ಹೆಮ್ಮೆ ಗೌರವಕ್ಕೆ ಪಾತ್ರವಾಗಿದೆ.

ತೆಲಂಗಣ ಸರ್ಕಾರಿ ಗಾಜ್ವೆಲ್ ಕಾಲೇಜಿಗೆ ನ್ಯಾಶನಲ್ ಎಸೆಸ್ಮೆಂಟ್ ಮತ್ತು ಆಕ್ರಿಡಿಟೇಶನ್ ಕಮಿಟಿ (ನ್ಯಾಕ್) ತಂಡದಲ್ಲಿ ವಿಕ್ಷಕ ಸದಸ್ಯರಾಗಿಯೂ ಡಾ| ರಮೇಶ್ ಸಾಲ್ಯಾನ್ ಪಾಲ್ಗೊಂಡಿರುತ್ತಾರೆ. ಉನ್ನತ ಶೈಕ್ಷಣಿಕ ಸಾಧನೆ, ಅನುಭವ ಹಾಗೂ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಈ ಅವಕಾಶ ಕೊಡಲಾಗುತ್ತದೆ. ರಾಷ್ಟ್ರಭಿಮಾನಿ ಹಾಗೂ ಸಮಾಜದ ಹಿತಚಿಂತಕರಾದ ಡಾ| ರಮೇಶ್ ಸಾಲ್ಯಾನ್ ಅವರು ದೇಶದ ಪ್ರಖ್ಯಾತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕ ವಿಚಾರ ಹಾಗೂ ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಬಂದ ಮಂಡಿಸಿದ್ದಾರೆ. ಆನೇಕ ಪತ್ರಿಕೆಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಉನ್ನತ ಲೇಖನಗಳನ್ನು ಬರೆದಿರುತ್ತಾರೆ.

ಡಾ| ರಮೇಶ್ ಸಾಲ್ಯಾನ್ ಇವರು ತುಮಕೂರು ವಿವಿಯ ಸಹಾಯಕ ಪ್ರಾಧ್ಯಾಪಕ, ಸಂಶೋಧನಾ ವಿಭಾಗದ ನಿರ್ದೇಶಕ, ಹಾಗು ಕಾನೂನು ಕೋಶದ ಉಪಕುಲಸಚಿವರಾಗಿ ನಿಷ್ಠೆ, ನಿಸ್ವಾರ್ಥತೆ, ಕಠಿಣ ಪರಿಶ್ರಮದ ಅವರ ದುಡಿಮೆ, ಸದಾ ದಣಿವರಿಯದ ಅವರ ಸೇವಾ ಕಾರ್ಯಶೈಲಿಯಿಂದಾಗಿ ತುಮಕೂರು ವಿವಿಯ ಸಂಶೋಧನ ವಿಭಾಗದ ನಿರ್ದೇಶಕ ಸೇರಿದಂತೆ ವಿವಿಯ ವಿವಿಧ ಹೆಚ್ಚುವರಿ ಜವಾಬ್ದಾರಿ ಸ್ಥಾನಮಾನಗಳು ಅವರಿಗೆ ಒಲಿದು ಬಂದಿತ್ತು.

ಡಾ. ರಮೇಶ್ ಸಾಲ್ಯಾನ್ ಅವರು ವಿವಿಯ ಪರೀಕ್ಷಾಂಗ ಉಪ ಕುಲಸಚಿವರಾಗಿ, ವಿಶೇಷಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುವ ಮೂಲಕ ಪರೀಕ್ಷಾಂಗ ವಿಭಾಗದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾದ ಸಾಫ್ಟವೇರ್ ಅನ್ನು ವಿವಿಗೆ ಉಚಿತವಾಗಿ ದೊರೆಯುವಂತೆ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಪರೀಕ್ಷಾಂಗ ವಿಭಾಗದಲ್ಲಿ ಪಾರದರ್ಶಕ ಶೀಘ್ರ ಫಲಿತಾಂಶ ದೊರಕಿಸಿ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿರುವುದು ಅವರ ಕಾರ್ಯಶೈಲಿಯ ಹೆಗ್ಗಳಿಕೆ.

ಎಂತಹುದೇ ಅಡ್ಡಿ ಆತಂಕ ಬಂದರೂ ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಮುಗಿಸುವ ಅವರ ಛಲ ಆತ್ಮಸ್ಥೈರ್ಯ, ರಾತ್ರಿ ಹಗಲೆನ್ನದೆ ಅದಕ್ಕಾಗಿ ಅವಿರತವಾಗಿ ಶ್ರಮಿಸುವ ಅವರ ಕಾರ್ಯಶೈಲಿ, ಪಾರದರ್ಶಕತೆ, ಮಾನವೀಯ ಅಂತಃಕರಣ, ಸರ್ವರನ್ನೂ ಸಮಾನತೆಯಿಂದ ಕಾಣುವ ಹೃದಯವಂತಿಕೆ ಅವರನ್ನು ಪ್ರತಿಷ್ಠಿತ ದೆಹಲಿ ವಿವಿಯ ಉನ್ನತ ಸ್ಥಾನದವರೆಗೆ ಕರೆದುಕೊಂಡು ಬಂದಿದೆ.

ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಶೆಟ್ಲಪಾಲು ಚಂದ್ರರತ್ನ ನಿವಾಸದ ಶ್ರೀಮತಿ ರತ್ನಾವತಿ ಮತ್ತು ಚಂದ್ರಶೇಖರ ಪೂಜಾರಿ ಅವರ ಸುಪುತ್ರರಾದ ಡಾ| ರಮೇಶ್ ಸಾಲ್ಯಾನ್ ಅವರು ಬಾಲ್ಯದಲ್ಲಿಯೇ ಲವಲವಿಕೆಯ ಕ್ರೀಯಾಶೀಲ ವ್ಯಕ್ತಿತ್ವದವರಾಗಿದ್ದು, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರೇಬಂಡಾಡಿ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಜೂನಿಯಾರ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ.

ಆ ನಂತರ ಅವರು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನಲ್ಲಿ ಉದ್ಯೋಗಿಯಾಗಿ ಸೇರಿದರು. ಅದೇ ಸಂದರ್ಭದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಪಿಯೂಸಿ ಹಾಗೂ ಪದವಿ ಶಿಕ್ಷಣ ಪಡೆದರು. ಮುಂದೆ ಉದ್ಯೋಗ ಬಿಟ್ಟು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ತನ್ನ ಅವಿರಥ ಪ್ರಯತ್ನ, ಕಠಿಣ ಪರಿಶ್ರಮದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿಯೇ ಡಾಕ್ಟರೆಟ್ ಪದವಿ ಪಡೆದರು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಉನ್ನತ ಗುರಿಯೊಂದಿಗೆ ಮುನ್ನಡೆದಾಗ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಡಾ.ರಮೇಶ್ ಸಾಲಿಯಾನ್ ಅವರ ಈ ಅಪೂರ್ವ ಯಶಸ್ಸು ನಿದರ್ಶನ.

ಮುಂದೆ ಅವರು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅಲ್ಲಿ ಉತ್ತಮ ಸೇವೆ ಸಲ್ಲಿಸಿ ಉಪನ್ಯಾಸಕರ ವಿದ್ಯಾರ್ಥಿಗಳ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾದರು. ಅಪಾರ ಸಾಮಾಜಿಕ ಕಳಕಳಿಯಿರುವ ಡಾ| ರಮೇಶ್ ಸಾಲ್ಯಾನ್ ಅವರು ಈ ಅವಧಿಯಲ್ಲಿ ವಿವಿಧ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಅದರಲ್ಲಿ ಮುಖ್ಯವಾಗಿ 2003 ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ಬ್ರಹ್ಮಶ್ರೀ ನಾರಾಯಣ ಗುರಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ಟಸ್ಟ್ ನ ಸ್ಥಾಪಕ ಟ್ರಸ್ಟಿಯಾಗಿ, ಅದರ ಕೋಶಾಧಿಕಾರಿಯಾಗಿ ಟ್ಟಸ್ಟ್ ನ ಸಾಮಾಜಿಕ ಸೇವೆಯಲ್ಲಿ ಅಪೂರ್ವವಾದ ಕಾರ್ಯಕ್ಕೆ ಸಾಕ್ಷಿಯಾದರು. ಅದೇ ಸಂದರ್ಭದಲ್ಲಿ ಆಗ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿದ್ದ ಶ್ರೀ ಕೆ ವಾಮನ್ ಅವರನ್ನು ಟ್ರಸ್ಟಿಗೆ ಕರದುಕೊಂಡು ಬಂದರು.

2004 ರಲ್ಲಿ ಟ್ರಸ್ಟಿನಿಂದ ಪ್ರಾರಂಬಿಸಲಾದ ಆತ್ಮಶಕ್ತಿ ತ್ರೆಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗೊಂದು ಪ್ರತಿಷ್ಠಿತ ಸ್ಥಾನ ದೊರಕಿಸಿದರು. ಇದೇ ಅಧಿಯಲ್ಲಿ ಅವರ ಬದುಕಿಗೆ ತಿರುವು ನೀಡಿದ ತುಮಕೂರು ವಿವಿಯ ಸಹಾಯಕ ಪ್ರಾಧ್ಯಾಪಕ ಹುದ್ದೆ ಒಲಿದು ಬಂತು. ಆ ಕಾರಣದಿಂದ ಅವರು ಟ್ಟಸ್ಟಿನಿಂದ ಬಿಡುಗಡೆಗೊಂಡರು. ಆತ್ಮಶಕ್ತಿ ತ್ರೆಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕತ್ವನ್ನು ಕೆ ವಾಮನ್ ಅವರಿಗೆ ಬಿಟ್ಟುಕೊಟ್ಟರು.

ಬ್ರಹ್ಮಶ್ರೀ ನಾರಾಯಣಗುರು ಅವರ ಮೇಲೆ ಅನನ್ಯ ಭಕ್ತಿ ಶ್ರದ್ಧೆ ಇಟ್ಟುಕೊಂಡಿರುವ ಡಾ. ರಮೇಶ್ ಸಾಲ್ಯಾನ್ ಅವರು ಗುರುಗಳ ತತ್ವಾದರ್ಶಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಸನ್ಮಾನ್ಯ ಶ್ರೀ ಜನಾರ್ದನ ಪೂಜಾರಿ ಹಾಗೂ ಸನ್ಮಾನ್ಯ ಶ್ರೀ ಬಂಗಾರಪ್ಪ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಡಾ. ರಮೇಶ್ ಸಾಲ್ಯಾನ್ ಅವರು ಸಮಾಜದ ಬಗ್ಗೆ ಅತ್ಯಂತ ವಿಶೇಷ ಪ್ರೀತಿ ಅಭಿಮಾನ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಡಾ. ರಮೇಶ್ ಸಾಲ್ಯಾನ್ ಅವರ ಹಿರಿಯ ಸಹೋದರ ಸುಧೀರ್ ಕುಮಾರ್ ಸಾಲ್ಯಾನ್ ಹಾಗೂ ಸಹೋದರರು ಬೆಳಗಾವಿಯಲ್ಲಿ ಹೋಟೇಲ್ ಉದ್ಯಮದಲ್ಲಿ ಯಶಸ್ಸನ್ನು ಹೊಂದಿ ತಮ್ಮನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿ ಸಹಾನ ರಮೇಶ್ ಸಾಲ್ಯಾನ್ ಹಾಗೂ ಇಬ್ಬರು ಮಕ್ಕಳ ಸಂತೃಪ್ತ ಕುಟುಂಬ ಅವರದ್ದು.

ಭಾರತದ ಪ್ರತಿಷ್ಠಿತ JNU, Delhi ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿ ಆಯ್ಕೆಯಾಗಿರುವ ಆಪೂರ್ವ ಸಾಧಕ ಡಾ| ರಮೇಶ್ ಸಾಲ್ಯಾನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.

Leave a Reply

Your email address will not be published. Required fields are marked *