• Thu. May 2nd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜು.30ಕ್ಕೆ ಇಸ್ರೋದಿಂದ 7 ಉಪಗ್ರಹಗಳ‌ ಉಡಾವಣೆ

ByKiran Poojary

Jul 25, 2023

ಶ್ರೀಹರಿಕೋಟಾ: ಇತ್ತೀಚೆಗಷ್ಟೇ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಹಾರಿಸಿರುವ ಇಸ್ರೋ ಈಗ ಇನ್ನೊಂದು ವಿಶೇಷ ಉಪಕ್ರಮಕ್ಕೆ ಸಿದ್ಧವಾಗಿದೆ. ಜು.30ಕ್ಕೆ ಅದು ಸಿಂಗಾಪುರದ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.

ಡಿಎಸ್‌-ಸಿಂಥೆಟಿಕ್‌ ಅಪೆರ್ಚರ್‌ ಏರೋಸ್ಪೇಸ್‌ ಎಂಬ ಉಪಗ್ರಹ 360 ಕೆ.ಜಿ. ತೂಕ ಹೊಂದಿದೆ. ಇಸ್ರೇಲ್‌ ವಿಜ್ಞಾನಿಗಳಿಂದ ಸಿದ್ಧಗೊಂಡಿರುವ ಇದು ಎಂತಹ ಹವಾಮಾನವಿದ್ದಾಗಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದರ ಜತೆಗೆ ಇತರೆ ಆರು ಸಣ್ಣಪುಟ್ಟ ಉಪಗ್ರಹಗಳು ಮೇಲೇರಲಿವೆ. ಇವನ್ನು ವೆಲಾಕ್ಸ್‌-ಎಎಂ, ಆರ್ಕೇಡ್‌, ಸ್ಕೂಬ್‌-2, ಗೆಲೇಸಿಯ-2, ಒಆರ್‌ಬಿ12-ಸ್ಟ್ರೈಡರ್‌, ನೂಲಯನ್‌ ಎಂದು ಹೆಸರಿಸಲಾಗಿದೆ.

ಈ ಉಪಗ್ರಹಗಳನ್ನು ಇಸ್ರೋದ ಪಿಎಸ್‌ಎಲ್‌ವಿ-ಸಿ56 ರಾಕೆಟ್‌ ಹೊತ್ತೂಯ್ಯಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಮೊದಲ ಉಡಾವಣಾ ಕೇಂದ್ರದಲ್ಲಿ ಬೆಳಗ್ಗೆ 6.30ಕ್ಕೆ ಉಪಗ್ರಹಗಳು ಮೇಲೇರಲಿವೆ. 4ನೇ ಕಕ್ಷೆಗೆ ಮುಟ್ಟಿದೆ ಚಂದ್ರಯಾನ-3 ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ದಿನೇದಿನೆ ಮೇಲೇರುತ್ತಿದೆ. ಇಸ್ರೋ ನೀಡಿರುವ ಮಾಹಿತಿ ಪ್ರಕಾರ ಜು.20ಕ್ಕೆ ನಾಲ್ಕನೇ ಕಕ್ಷೆಯನ್ನು ಮುಟ್ಟಿದೆ. ಅವರ ಪ್ರಕಾರ ಭೂಮಿಯಿಂದ 71,351 ಕಿ.ಮೀ.x233 ಕಿ.ಮೀ. ಎತ್ತರಕ್ಕೇರಿದೆ.

Leave a Reply

Your email address will not be published. Required fields are marked *