• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

ByKiran Poojary

Jul 25, 2023

ನವದೆಹಲಿ: ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನೇ ಬಿಟ್ಟು ಹೋರಟಿರುವ ಮಹಿಳಾ ಯೋಧೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಭಾವನಾತ್ಮಕ ವಿಡಿಯೋ ಎಂಥವರನ್ನೂ ಭಾವುಕರಾಗಿಸುತ್ತದೆ.

ಬಿಎಸ್‌ಎಫ್ ಮಹಿಳಾ ಯೋಧೆ ತನ್ನ 9 ತಿಂಗಳ ಮಗುವನ್ನು ದೇಶ ಸೇವೆಗಾಗಿ ಬಿಟ್ಟು ಹೋಗುತ್ತಿರುವ ವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿದೆ. ಮನೆಗೆ ಬಂದಿದ್ದ ಬಿಎಸ್‌ಎಫ್ ಮಹಿಳಾ ಯೋಧರೊಬ್ಬರು ಕರ್ತವ್ಯಕ್ಕೆ ಹಿಂತಿರುಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮಹಿಳೆ ರೈಲು ಹತ್ತುವಾಗ ತನ್ನ ಮಗು ತನ್ನ ತೋಳುಗಳಲ್ಲಿ ಅಳುತ್ತಿರುವುದನ್ನು ನೋಡಿ ಭಾವುಕಳಾಗುತ್ತಾಳೆ.

ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಡುತ್ತಿದ್ದಂತೆ ಆಕೆಯ ಪತಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಭಾವುಕರಾಗಿ ಕಣ್ಣೀರು ಸುರಿಸುತ್ತಾ ಆಕೆ ಎಲ್ಲರಿಗೂ ವಿದಾಯ ಹೇಳುತ್ತಾಳೆ. ಮಹಿಳಾ ಸೈನಿಕ ಮತ್ತು ಆಕೆಯ ಮಗುವಿನ ಭಾವನಾತ್ಮಕ ವಿದಾಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಮಹಿಳಾ ಯೋಧೆಯ ದೇಶ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *