• Mon. May 6th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯಕ್ಷ ಪರಿಚಯ : ಯಕ್ಷ ಕನ್ನಿಕೆ ಕಿರಾಡಿ ವಿಶ್ವನಾಥ್ ಮೊಗವೀರ

ByKiran Poojary

Sep 15, 2023

ಶ್ರೀ ವಿಶ್ವನಾಥ ಮೊಗವೀರ ಇವರು ರಾಮ ಮತ್ತು ಗಿರಿಜಾ ದಂಪತಿಯವರ ಮಗನಾಗಿ ದಿನಾಂಕ 7. 5. 1989ರಂದು ಕಿರಾಡಿಯಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆ ಜಾಲಹಳ್ಳಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರ್ಸೆಯಲ್ಲಿ ಮುಗಿಸಿದ ನಂತರ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ನಗರ ಸುಬ್ರಹ್ಮಣ್ಯ ಆಚಾರ್ಯರಿಂದ ತಾಳ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದರು.

ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಮಂಡಳಿ ಮಂದಾರ್ತಿ ಮೇಳದಲ್ಲಿ ಮೊದಲು ಗೆಜ್ಜೆ ಕಟ್ಟುವುದರ ಮೂಲಕ ಪ್ರಾರಂಭವಾದ ಇವರ ಯಕ್ಷಗಾನ ಸೇವೆ ಪ್ರಸ್ತುತ ಎಂಟು ವರ್ಷಗಳಿಂದ ಶ್ರೀ ಅಮೃತೇಶ್ವರಿ. ಮೇಳ ಕೋಟ ಈ ಮೇಳದಲ್ಲಿ ತನ್ನ ಕಲಾ ಸೇವೆ ಮುಂದುವರಿಸುತ್ತಿದ್ದಾರೆ.

ಹೆರಂಜಾಲು ಗೋಪಾಲ ಗಾಣಿಗ ಕೋಟ ಸುರೇಶ್ ಶ್ರೀ ಉಪ್ಪುಂದ ನಾಗೇಂದ್ರ ರಾವ್ ಮಾಧವನ ನಾಗೂರು ಮುಂತಾದ ಹಿರಿಯ ಕಲಾವಿದರ ಮಾರ್ಗದರ್ಶನದೊಂದಿಗೆ ಕಲಿಯುತ್ತಾ ಬೆಳೆಯುತ್ತಾ ಬಂದವರು ಹಿರಿಯ ಕಲಾವಿದರು ಹಾಗೂ ದಿಗ್ಗಜ ಕಲಾವಿದರು ಒಡನಾಟದಿಂದ ಭವಿಷ್ಯದ ಭರವಸೆಯೊಂದಿಗೆ ಯುವಕಲಾವಿದನಾಗಿಸಿಕೊಂಡಿದ್ದಾರೆ.

ಇವರ ದಾಂಪತ್ಯ ಜೀವನದಲ್ಲಿ ಪ್ರಫುಲ್ ಎಂಬ ಹೆಸರಿನ ಹೆಣ್ಣಿನ ಕೈ ಹಿಡಿದಿದ್ದಾರೆ ಒಂದು ಹೆಣ್ಣು ಮಗು ಆರ್ವಿ ಎಂಬ ಹೆಸರಿನ ಕಂದನನ್ನು ಪಡೆದಿದ್ದಾರೆ. ಇವರ ಕಲಾ ಸೇವೆಯನ್ನು ಕಂಡು ಅದೆಷ್ಟು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದಾರೆ. ಇವರು ಮಳೆಗಾಲದಲ್ಲಿ ಜೀವನೋಪಾಯಕ್ಕಾಗಿ ಕುಂದಾಪುರ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದ ಮಹಾಸತಿ ಕೃಪಾಪೋಷಿತ ಯಕ್ಷಗಾನ ಚಿಕ್ಕ ಮೇಳ ನಾಯ್ಕನಕಟ್ಟೆ ಇವರ ಜೊತೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಇನ್ನೂ ಸದಾ ಕಾಲ ಕಲಾಸೇವೆ ಇದೇ ರೀತಿ ಮುಂದುವರೆಯಲಿ ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಶ್ರೀ ದೇವರು.ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವ .. ಹೊಸ ಕಿರಣ ನ್ಯೂಸ್ ಚಾನೆಲ್.

Leave a Reply

Your email address will not be published. Required fields are marked *