• Sun. Apr 20th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಶ್ರೀ ಬನಶಂಕರಿ ಪಬ್ಲಿಕ್ ಸ್ಕೂಲ್ ಗೆ ದಶಮಾನೋತ್ಸವ ಸಂಭ್ರಮ

ByKiran Poojary

Dec 20, 2023

🖋️ ವರದಿ ಸಚೀನ ಜಾಧವ ಸಾವಳಗಿ

ಸಾವಳಗಿ: `ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂಬ ಪರಿಕಲ್ಪನೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಶ್ರೀಮತಿ ಎಸ್. ಎಸ್ ಶೇಗುಣಸಿ ಅವರು ಹತ್ತು ವರ್ಷಗಳ ಹಿಂದೆ ಶ್ರೀ ಬನಶಂಕರಿ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆ ತೆರೆದರು.

ನಗರ ಪ್ರದೇಶದ ಮಕ್ಕಳು ಪಡೆಯುವಂಥ ಗುಣಮಟ್ಟದ ಶಿಕ್ಷಣ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬುದು ಅವರ ಮುಖ್ಯ ಧ್ಯೇಯ. ಅದನ್ನು ಈಗ ಅವರ ಸ್ಕೂಲ್ ಬನಶಂಕರಿ ಪಬ್ಲಿಕ್ ಸ್ಕೂಲ್ ಈಡೇರಿಸಿದೆ.

ಪ್ರತಿ ವರ್ಷ ನಡೆಯುವ ಶಾಲೆಯಲ್ಲಿ ಸ್ಟಾರ್ ಉತ್ಸವ ಕಾರ್ಯಕ್ರಮ ಈ ವರ್ಷ ವಿಶೇಷ ರೀತಿಯಲ್ಲಿ ಆಚರಣೆಗೆ ನಿರ್ಧಾರ ಮಾಡಿದ್ದಾರೆ, ಯಾಕೆಂದರೆ ಶಾಲೆ ಪ್ರಾರಂಭವಾಗಿ 10 ವರ್ಷ ಪೂರೈಸಿದ್ದು ಇದರ ಸಂಭ್ರಮಾಚರಣೆಗಾಗಿ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಡಿ 21 ರಂದು ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸಂತೆ ಮೇಳ ಕಾರ್ಯಕ್ರಮ ನಡೆಯುವುದು.

ಡಿ 22 ರಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ, ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಡಿ 23 ರಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ, ಹಾಸ್ಯ ಸಂಜೆ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಶಾಲಾ ಕಾರ್ಯದರ್ಶಿ ಎಸ್ ಎಸ್ ಶೇಗುಣಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *