• Thu. May 23rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕುಡುಂಬೂರು ನಡುಗಿರಿ ವಾರ್ಷಿಕ ನೇಮೋತ್ಸವ : ಫೆ.2 ರಿಂದ ಫೆ. 4 ರವರೆಗೆ ಜರುಗಲಿದೆ

ByKiran Poojary

Jan 29, 2024

ಬೈಕಂಪಾಡಿ : ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದ ಮುಂಗಾರು ಬಸ್ ನಿಲ್ದಾಣದ ಸಮೀಪದಲ್ಲಿರುವ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಹಾಗೂ ಸಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಫೆ.2 ರಿಂದ ಆರಂಭಗೊಂಡು ಫೆ.4 ರವರೆಗೆ ಜರುಗಲಿರುವುದು.

ಫೆ.2 ರಂದು ಶುಕ್ರವಾರ
ಬೆಳಿಗ್ಗೆ 8 ರಿಂದ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ. ಹೊಳ್ಳರ ಚಾವಡಿಯಲ್ಲಿ ಜಾರಂದಾಯ ಸಪರಿವಾರ ದೈವಗಳಲ್ಲಿ ಪ್ರಾರ್ಥನೆ, ಹಾಗೂ ನಾಗದೇವರಿಗೆ ತಂಬಿಲ ಸೇವೆ.
ಸಂಜೆ 4 ಗಂಟೆಗೆ ದೈವಸ್ಥಾನಕ್ಕೆ ಚಿನ್ನ -ಬೆಳ್ಳಿಯ ರೂಪದಲ್ಲಿ ಬಂದ ಹರಕೆ ಹಾಗೂ ಹೊರೆ ಕಾಣಿಕೆಯನ್ನು ಕುಡುಂಬೂರು ಕಲ್ಲುರ್ಟಿ ದೈವಸ್ಥಾನದಿಂದ ಕುಡುಂಬೂರು ನಡುಗಿರಿ ದೈವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಗುವುದು.
ಸಂಜೆ 5 ಗಂಟೆಗೆ ದೈವಗಳ ಭಂಡಾರ ಏರುವುದು. ರಾತ್ರಿ ಗಂಟೆ 8ಕ್ಕೆ ಮೈಸಂದಾಯ ದೈವದ ನೇಮೋತ್ಸವ. ರಾತ್ರಿ 9.30ಕ್ಕೆ ಕಾಂತೇರಿ ಜುಮಾದಿ, ಸರಳ ಜುಮಾದಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.

ಫೆ.3 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ.
ಮಧ್ಯಾಹ್ನ 12.30 ರಿಂದ 3 ರ ತನಕ ಸಾರ್ವಜನಿಕ ಮಹಾ “ಅನ್ನಸಂತರ್ಪಣೆ “ನಡೆಯಲಿದೆ.
ಸಂಜೆ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಗುರುಪುರ ವಜ್ರದೇಹಿ ಮಠದ ಪ.ಪೂ.ಶ್ರೀ. ರಾಜಶೇಖರಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ,
ವಿದ್ವಾನ್ ಪಂಜ ಭಾಸ್ಕರ್ ಭಟ್ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.

ಸಭಾಧ್ಯಕ್ಷರಾಗಿ ಸೋಮಯಾಜಿ ಎಸ್ಟೇಟ್ಸ್ ಮಾಲಕರಾದ ರಘುನಾಥ್ ಸೋಮಯಾಜಿ ಅವರು ಭಾಗವಹಿಸಲಿದ್ದಾರೆ.
ಹಾಗೆಯೇ ಇದೇ ಸಂದರ್ಭದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು. ರಾತ್ರಿ 9 ಗಂಟೆಗೆ ಶ್ರೀ ಜಾರಂದಾಯ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.

ಫೆ.4 ರಂದು ರವಿವಾರ ರಾತ್ರಿ 7 ಗಂಟೆಗೆ ಪಿಲಿಚಂಡಿ ದೈವದ ಎಣ್ಣೆಬೂಲ್ಯ .
ರಾತ್ರಿ 10 ಗಂಟೆಗೆ ಪಿಲಿಚಂಡಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *