• Mon. Apr 29th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ- ವಯೋವೃದ್ಧರ ಮತ ಚಲಾವಣೆ
ಕುಂದಾಪುರ ಅಸಿಸ್ಟೆಂಟ್ ಕಮೀಷನರ್ ರಶ್ಮಿ ಭೇಟಿ

ByKiran Poojary

Apr 14, 2024

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವಿವಿಧ ಭಾಗಗಳಲ್ಲಿ 80ವರ್ಷ ಮೇಲ್ಪಟ್ಟ ವಯೋವೃದ್ಧ ಮನೆಯಲ್ಲೆ ಮತದಾನ ಕಾರ್ಯಕ್ರಮ ಭಾನುವಾರ ವಿವಿಧ ವ್ಯಾಪ್ತಿಯಲ್ಲಿ ನಡೆಯಿತು.

ಚುನಾವಣಾ ಆಯೋಗದ ವಿಶೇಷ ಸೂಚನೆಯಂತೆ ವಯೋವೃದ್ಧರು ಮನೆಯಲ್ಲೆ ಮತದಾನ ಮಾಡಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ  ಈ ಭಾಗಗಳಿಗೆ ಕುಂದಾಪುರ ಅಸಿಸ್ಟೆಂಟ್ ಕಮೀಶನರ್ ರಶ್ಮಿ ಭೇಟಿ ನೀಡಿ ಪರಿಶೀಲಿಸಿದರು. ಸುಡು ಬಿಸಿಲಿನಲ್ಲಿ ಅಧಿಕಾರಿ ವರ್ಗ ಸಂಚಾರ ಕಾರ್ಯಕ್ಕೆ ರಶ್ಮಿ  ಪ್ರಶಂಸೆ ವ್ಯಕ್ತಪಡಿದರಲ್ಲದೆ ಆರೋಗ್ಯದ ಕಾಳಜಿಯ ಕಿವಿಮಾತು ಹೇಳಿದರು.

ಈ ವೇಳೆ ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಚುನಾವಣಾ ಸೇಕ್ಟರ್ ಆಫೀಸರ್ ನಾಗೇಶ್, ಕೋಟ ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಫೋಲಿಂಗ ಆಫೀಸರ್ ಗೋಪಾಲ ಭಟ್, ಸತೀಶ್ ದೇವಾಡಿಗ, ಮೈಕ್ರೋ ಅಫ್ಜರ್ವಾಜರ್ ಅಂಕುಶ್ ಸಗಣೆ, ಆಶಾ ಕಾರ್ಯಕರ್ತೆ ಮತ್ತಿತರರು ಇದ್ದರು.

ಕೋಟ ಗ್ರಾಮಪಂಚಾಯತ್ ವಿವಿಧ ಭಾಗಗಳಲ್ಲಿ 80ವರ್ಷ ಮೇಲ್ಪಟ್ಟ ವಯೋವೃದ್ಧ ಮನೆಯಲ್ಲೆ ಮತದಾನ ಕಾರ್ಯಕ್ರಮದಲ್ಲಿ ಕುಂದಾಪುರ ಅಸಿಸ್ಟೆಂಟ್ ಕಮೀಶನರ್ ರಶ್ಮಿ ಭೇಟಿ ನೀಡಿ ಪರಿಶೀಲಿಸಿದರು. ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಚುನಾವಣಾ ಸೇಕ್ಟರ್ ಆಫೀಸರ್ ನಾಗೇಶ್,ಕೋಟ ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *