• Tue. Apr 30th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಸ್ತಾನ- ಮಾದರಿಯಾದ್ರು ಈ ಹಿರಿಯ ಮಹಿಳೆ ಮತದಾನಗೈದು ಇಹಲೋಕ ತ್ಯಜಿಸಿದ ಯಶೋಧ ಉಪಾಧ್ಯಾ.

ByKiran Poojary

Apr 16, 2024

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ  ಚಡಗರ ಅಗ್ರಹಾರದ  ಶ್ಯಾನಭೋಗರ ಮನೆಯ  ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯಾಯರ ಪತ್ನಿ  ಪಿ.ಯಶೋಧ ನಾರಾಯಣ ಉಪಾಧ್ಯಾಯ 82.ವ ಮತದಾನ ಮಾಡಿ ತನ್ನ ಕರ್ತವ್ಯ ಮೆರೆದು ಇಹಲೋಕ ತ್ಯಜಿಸಿದರು.

ಸಾಮಾನ್ಯವಾಗಿ ಇತ್ತೀಚಿಗಿನ ವರ್ಷದಲ್ಲಿ ಚುನಾವಣಾ ಆಯೋಗ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲು ವಿವಿಧ ತರಹದ ಮತದಾನ ಜಾಗೃತಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಷ್ಟಾಗಿಯೂ ಚುನಾವಣಾ ಆಯೋಗ 80ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಮನೆಯಲ್ಲೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ, ಇದರ ನಡುವೆಯೂ ಯಶೋದ ಉಪಾಧ್ಯಯರು ಆರೋಗ್ಯ ಹದಗೆಟ್ಟಿರೂ ಆಸ್ಪತ್ರೆಗೆ ಹೋಗ ಬೇಕಿದ್ದ ಸನ್ನಿವೇಶದ ನಡುವೆಯೂ ಮತ ಹಾಕಿಸಿಕೊಳ್ಳಲು ಸಂಬAಧಪಟ್ಟ ಅಧಿಕಾರಿಗಳು ಸೋಮವಾರ   ಅಪರಾಹ್ನ 12.30 ಕ್ಕೆ ಮನೆಗೆ ಅಗಮಿಸುತ್ತಾರೆ ಎಂಬುವುದನ್ನು ಖಾದು ಖಾತರಿಪಡಿಸಿಕೊಂಡು ಮತ ಚಲಾವಣೆಗೈದು ಸಂಜೆ 5.ಗ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ರಾತ್ರಿ  ವೇಳೆ ನಿಧನರಾದರು.ಇರ್ವರು ಪುತ್ರರು ಒರ್ವ ಪುತ್ರಿಯನ್ನು ಅಗಲಿದ್ದಾರೆ.

ಆರೋಗ್ಯದಲ್ಲಿ ಏರುಪೇರು, ಮತದಾನ ಪ್ರಜ್ಞೆ
ಯಶೋದ ಉಪಾಧ್ಯಾಯರು ಆರೋಗ್ಯದಲ್ಲಿ ಏರುಪೇರಾದರೂ ಪುತ್ರ ರಾಘವೇಂದ್ರ ಉಪಾಧ್ಯ ಆಸ್ಪತ್ರೆ ಕರೆದೊಯ್ಯಲು ಯತ್ನಿಸಿದರೂ ದೇಶದ ಹಿತದೃಷ್ಠಿಯಿಂದ ಮತಚಲಾಯಿಸಿಯೇ ಆಸ್ಪತ್ರೆಗೆ ತೆರಳುತ್ತೇನೆ ಎಂದು ತನ್ನ ಮತದಾನದ ಪ್ರಜ್ಞೆ ಮರೆದಿದ್ದಾರೆ ಇದೊಂದು ಪ್ರಸ್ತುತ ಯುವ ಮತದಾರರಿಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

Leave a Reply

Your email address will not be published. Required fields are marked *