• Wed. May 22nd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಲಿಗ್ರಾಮ- ವಸಂತ ವೇದ ಶಿಬಿರದಿಂದ ಜೀವನ ಮೌಲ್ಯ ವೃದ್ಧಿ -ಡಾ.ಕಾರಂತ

ByKiran Poojary

Apr 18, 2024

ಕೋಟ:  ಸಹಿಷ್ಣುತೆ, ಸಮಾನತೆ, ಸಾಮರಸ್ಯ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಉಪನೀತ ವಟುಗಳಿಗೆ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ವಸಂತ ವೇದ ಶಿಬಿರವು ಪೂರಕವಾಗಿದ್ದು, ಶಿಬಿರಾರ್ಥಿಗಳಿಗೆ ಶ್ರೇಯಸ್ಸಾಗಲೆಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ದೇವಳದ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಕೂಟ ಮಹಾಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಕಾರ್ಯದರ್ಶಿ ಮಹಾಬಲ ಹೇರ್ಳೆ, ಮಂಜುನಾಥ ಉಪಾಧ್ಯ, ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ವೃಂದದ ಚಿದಾನಂದ ತುಂಗ ಮತ್ತು ಸುಮಾರು ನಾನೂರು ಮಂದಿ ಶಿಬಿರಾರ್ಥಿಗಳು ಮತ್ತು ಪೋಷಕ ವೃಂದದವರು ಉಪಸ್ಥಿತರಿದ್ದರು.

ದೇವಳದ ಆಗಮನಿಗಮಾಗಮ ವೇದ ಪಾಠ ಶಾಲೆಯ ವಿದ್ಯಾರ್ಥಿಗಳು,  ದೇಗುಲದ ಪ್ರಬಂಧಕ ನಾಗರಾಜ ಹಂದೆ ಮತ್ತು ಸಿಬ್ಬಂದಿ ವರ್ಗದವರ ನೇತೃತ್ವದಲ್ಲಿ ಮೂರು ವಾರಗಳ ತನಕ ಶಿಬಿರವು ನಡೆಯಲಿದ್ದು, ಮೇ ೯ ರಂದು ಸಮಾರೋಪ ಸಮಾರಂಭವು ಜರುಗಲಿದೆಯೆಂದು ಉಪ ಪ್ರಬಂಧಕ ಪಾಂಡೇಶ್ವರ ಗಣೇಶ ಭಟ್ಟ ತಿಳಿಸಿದರು..

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಆಯೋಜಿಸಲಾದ ವಸಂತ ವೇದ ಶಿಬಿರವನ್ನು ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು. ದೇವಳದ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *