• Wed. May 1st, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಯಕ್ಷ ಕುಲ ತಿಲಕ ಬಿರುದು ನೀಡಿ ಸನ್ಮಾನ

ByKiran Poojary

Apr 18, 2024

ಕೋಟ : ಸತತ 46 ಕ್ಷೇತ್ರಗಳ ಅಧ್ಯಯನ ಮಾಡಿ 46 ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ರಚಿಸಿ ಜಾಗತಿಕ ದಾಖಲೆ ನಿರ್ಮಿಸಿದ ಪ್ರಸಂಗಕರ್ತ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಬಿ.ಕೆ.ಫ್ರೆಂಡ್ಸ್ ಹಳೆಅಳಿವೆ ಕೋಟೇಶ್ವರ ಇವರ ಬಿ.ಕೆ. ಟ್ರೋಫಿ-2024ರ ಸಮಾರೋಪ ಸಮಾರಂಭದಲ್ಲಿ ಯಕ್ಷ ಕುಲ ತಿಲಕ ಬಿರುದು ನೀಡಿ 575ನೇ ಸನ್ಮಾನವನ್ನು ಶೆಟ್ಟಿಗಾರ್ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು  ಬಿ.ಕೆ. ಫ್ರೆಂಡ್ಸ್ನ ರಾಘವೇಂದ್ರ ವಿ. ಮೆಂಡನ್ ವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗ್ರಾಮ ಲೆಕ್ಕಿಗರಾದ ಹರೀಶ್ ಶೆಟ್ಟಿ, ಕೋಟೇಶ್ವರ ಉದ್ಯಮಿ ರಾಜೇಶ್, ನಾಲ್ಕು ಪಾದ ಹಾÊಗುಳಿಯ ದೇವಸ್ಥಾನದ ಅಧ್ಯಕ್ಷ ಕೃಷ್ಣಮೂರ್ತಿ, ಕೋಟೇಶ್ವರ ವಲಯದ ಮೊಗವೀರ ಘಟಕದ ಅಧ್ಯಕ್ಷ ನಾಗರಾಜ್ ಬೀಜಾಡಿ, ಹಳೆಹಳಿವೆ ಶನೀಶ್ವರ ದೇವಸ್ಥಾನದ ಕಾರ್ಯದರ್ಶಿ ರಾಘವೇಂದ್ರ ಮೊಗವೀರ ಭಾಗವಹಿಸಿ ಶುಭ ಹಾರೈಸಿದರು.

ಬಿ.ಕೆ.ಟ್ರೋಫಿ -2024 ಪ್ರಥಮ ಬಹುಮಾನವನ್ನು ಕಟ್ಟೆ ಫ್ರೆಂಡ್ಸ್ ಕಾಳಾವರ, ದ್ವಿತೀಯ ಬಹುಮಾನವನ್ನು ಬಿ.ಬಿ.ಸಿ ಕ್ರಿಕೇರ‍್ಸ್ ಬೀಜಾಡಿಯವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪಿಯುಸಿಯ ವಿದ್ಯಾರ್ಥಿನಿ ಸುರಕ್ಷಾರವನ್ನು ಸನ್ಮಾನಿಸಲಾಯಿತು. ಕಾರ್ತಿಕ್ ಸ್ವಾಗತಿಸಿ ವಂದಿಸಿದರೆ, ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಿ.ಕೆ.ಫ್ರೆಂಡ್ಸ್ ಹಳೆಅಳಿವೆ ಕೋಟೇಶ್ವರ ಇವರ ಬಿ.ಕೆ. ಟ್ರೋಫಿ-2024ರ ಸಮಾರೋಪ ಸಮಾರಂಭದಲ್ಲಿ ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಯಕ್ಷ ಕುಲ ತಿಲಕ ಬಿರುದು ನೀಡಿ ಸನ್ಮಾನಿಸಲಾಯಿತು. ಬಿ.ಕೆ. ಫ್ರೆಂಡ್ಸ್ನ ರಾಘವೇಂದ್ರ ವಿ. ಮೆಂಡನ್, ಗ್ರಾಮ ಲೆಕ್ಕಿಗರಾದ ಹರೀಶ್ ಶೆಟ್ಟಿ, ಕೋಟೇಶ್ವರ ಉದ್ಯಮಿ ರಾಜೇಶ್, ನಾಲ್ಕು ಪಾದ ಹಾÊಗುಳಿಯ ದೇವಸ್ಥಾನದ ಅಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *