• Wed. May 1st, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನೆ ಮನೆ ಪ್ರಚಾರದ ಪೂರ್ವಭಾವಿ ತರಬೇತಿ ಸಭೆ

ByKiran Poojary

Apr 18, 2024

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕೋಟ ಬ್ಲಾಕ್ ವ್ಯಾಪ್ತಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಗ್ಯಾರೆಂಟಿ ಮನೆ ಮನೆ ಪ್ರಚಾರದ ಪೂರ್ವಭಾವಿ ತರಬೇತಿ ಸಭೆ ಮಂಗಳವಾರ ಕೋಟ ಬ್ಲಾಕ್ ಕಛೇರಿಯಲ್ಲಿ ಜರಗಿತು.

ಸ್ವಯಂಸ್ಫೂರ್ತಿಯಿಂದ ಪೂರ್ವಭಾವಿ ಸಭೆಗೆ ಆಗಮಿಸಿದ ಮಹಿಳಾ ಕಾರ್ಯಕರ್ತೆಯರು ಸಿದ್ಧರಾಮಯ್ಯನವರ ಸರಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಯನ್ನೂ ತಲುಪಿರುವ ಬಗ್ಗೆ ಮಾಹಿತಿ ಸಂಗ್ರಹದ ಜೊತೆಗೆ ಒಂದು ಸುತ್ತಿನ  ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರತಿ ಬೂತ್‌ನಲ್ಲೂ ಮಹಿಳಾ ಕಾರ್ಯಕರ್ತರನ್ನೇ ನಿಯೋಜಿಸುವ ಕುರಿತು  ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಚರ್ಚಿಸಿದರಲ್ಲದೆ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ  ಮಹಿಳಾ ಕಾಂಗ್ರೆಸ್ ಸಂಘಟನೆ ಯನ್ನು ಪ್ರತಿ ಬೂತ್‌ನಲ್ಲಿ ಗಟ್ಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡುವ ಉದ್ದೇಶ ಹಾಗೂ ಕಾಂಗ್ರೆಸ್‌ನ ಅತ್ಯಂತ ಸಮರ್ಥ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆಯವರ ಅಭಿವೃದ್ಧಿ ಕುರಿತಾಗಿ ಮನೆ ಮನೆ ತಿಳಿ ಹೇಳುವ ಕಾರ್ಯ ಮಾಡಬೇಕು ಎಂದು ಕರೆ ಇತ್ತರು.

ಕೋಟ ಬ್ಲಾಕ್ ಕಾಂಗ್ರೆಸ್ ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಚುನಾವಣೆ ಉಸ್ತುವಾರಿ  ವಿನಯ್ ಕುಮಾರ ಕಬ್ಯಾಡಿ ಅವರು  ಸಭೆಯಲ್ಲಿದ್ದ ಮಹಿಳೆಯರಿಗೆ ಮತದಾರರ ಮನೆ ಮನೆಗೆ ತೆರಳುವಾಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಸಮಗ್ರ ಅನುಷ್ಠಾನದ ಮಾಹಿತಿ ಬಗ್ಗೆ ಮನದಟ್ಟಾಗಿ ತಿಳಿಸಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಭೆನಲ್ಲಿ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ , ಕೋಟ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ಅಧ್ಯಕ್ಷ ರೇಖಾ.ಪಿ.ಸುವರ್ಣ, ಶ್ರೀಧರ್ ಪಿ.ಎಸ್ ಉಪಸ್ಥಿತರಿದ್ದರು.

ಕೋಟ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕೋಟ ಬ್ಲಾಕ್ ವ್ಯಾಪ್ತಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಗ್ಯಾರೆಂಟಿ ಮನೆ ಮನೆ ಪ್ರಚಾರದ ಪೂರ್ವಭಾವಿ ತರಬೇತಿ ಸಭೆ ಮಂಗಳವಾರ ಕೋಟ ಬ್ಲಾಕ್ ಕಛೇರಿಯಲ್ಲಿ ಜರಗಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಟ ಬ್ಲಾಕ್ ಕಾಂಗ್ರೆಸ್ ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಚುನಾವಣೆ ಉಸ್ತುವಾರಿ  ವಿನಯ್ ಕುಮಾರ ಕಬ್ಯಾಡಿ, ಶ್ರೀಧರ್ ಪಿ.ಎಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *