ಕೋಟ: ಕೋಟದ ಪೇಟೆ ದೇವರೆಂದೇ ಪ್ರಸಿದ್ಧವಾಗಿರುವ ಕೋಟದ ವರುಣತೀರ್ಥ ಶ್ರೀ ರಾಜಶೇಖರ ದೇವಸ್ಥಾನದ ವಾರ್ಷಿಕ ವರ್ಧಂತಿ ಉತ್ಸವ ಎ.22ರಂದು ನಡೆಯಲಿದೆ. ಆ ಪ್ರಯುಕ್ತ ಶತರುದ್ರಾಭಿಷೇಕ, ಕಲಶಾಭಿಷೇಕ, ರಂಗಪೂಜೆ, ದೀಪೋತ್ಸವ, ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ ಸೇರಿದಂತೆ ವಿವಿಧ ಭಜನಾ ತಂಡಗಳಿಂದ ಕಾರ್ಯಕ್ರಮ, ವೈದಿಕ ವಿಧಿವಿಧಾನಗಳು, ಅಪರಾಹ್ನ ಅನ್ನಸಂತರ್ಪಣೆ, ರಾತ್ರಿ ಶ್ರೀ ವೀರಭದ್ರ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಅವರಿಂದ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಅಧ್ಯಕ್ಷ ಜಿ.ಪ್ರಭಾಕರ ಅಡಿಗ ತಿಳಿಸಿದ್ದಾರೆ.
ಎ.22ಕ್ಕೆ ಶ್ರೀ ರಾಜಶೇಖರ ದೇವಳದ ವರ್ಧಂತಿ ಉತ್ಸವ
