• Thu. May 2nd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕಾರ್ಕಡ- ಮನೆಯಂಗಳದಲ್ಲಿ ಸಾಹಿತ್ಯ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ

ByKiran Poojary

Apr 19, 2024

ಕೋಟ: ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ, ಕನ್ನಡ ಸಾಹಿತ್ಯ ಪರಿಷತ್, ಬ್ರಹ್ಮಾವರ ಘಟಕ, ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಯಕ್ಷಧಾಮ, ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ ಕನಕಾಂಗಿ ಕಲ್ಯಾಣ ಎ.22ರ ಸೋಮವಾರ ಸಂಜೆ 3.30ಕ್ಕೆ ಭೂಮಿಕಾ ಮನೆಯಂಗಳ, ಕಾರ್ಕಡ ಇಲ್ಲಿ ಜರಗಲಿದೆ

ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಕಲಾ ಸಾಹಿತಿ ಎಚ್. ಜನಾರ್ದನ ಹಂದೆ, ಕಲಾ ಸಾಹಿತಿ, ಮಂಗಳೂರು ಇವರು ನೆರವೆರಿಸಲಿದ್ದಾರೆ
ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ  ಸುರೇಂದ್ರ ಅಡಿಗ ಇವರು ವಹಿಸಲಿದ್ದಾರೆ. ಶುಭಾಶಂಸನೆಯನ್ನು  ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್,ಸನ್ಮಾನ ಕಾರ್ಯಕ್ರಮದ ಭಾಗವಾಗಿ ಮಾಸ್ಟರ್ ಅಥ್ಲೆಟಿಕ್ಸ್ ಪಟು ದಿನೇಶ ಗಾಣಿಗ, ಡಾಕ್ಟರೇಟ್ ಪದವೀದರ ಡಾ. ಕೆ. ಕೃಷ್ಣಮೂರ್ತಿ ಮಯ್ಯ, ಕಲಾವಿದೆ  ಸುಮನಾ ಆರ್. ಹೇರ್ಳೆ,ಖ್ಯಾತ ಲೇಖಕಿ ಸವಿತಾ ಶಾಸ್ತಿç ಇವರುಗಳು ಸನ್ಮಾನ ಸ್ವೀಕರಿಸಲಿದ್ದಾರೆ. ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ

ಅಪರಾಹ್ನ 3:30ಕ್ಕೆ ಕೆ. ಚಂದ್ರಕಾಂತ ನಾಯರಿ ಮತ್ತು ಬಳಗ ಇವರಿಂದ ಸಂಗೀತ ಸುಧೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಮತ್ತು ಸಂಜೆ 6 ರಿಂದ ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ ಹಾಲಾಡಿ,ಚಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ ಮದ್ದಳೆಯಲ್ಲಿ ಎನ್. ಜಿ. ಹೆಗಡೆ, ಮುಮ್ಮೇಳದಲ್ಲಿ ಪಾತ್ರದಾರರಾಗಿ ಸುಭದ್ರೆ ಮಾಧವ ನಾಗೂರು, ಕೌರವ ಪ್ರಶಾಂತ್ ಗಾಣಿಗ, ಕನಕಾಂಗಿ ಪ್ರಜ್ವಲ್ ಮಣೂರು, ಕೋಟ ಸುರೇಶ ಬಂಗೇರ, ಬಲರಾಮ  ಸುಜಯೀಂದ್ರ ಹಂದೆ, ಅಭಿಮನ್ಯು  ರವಿ ಕೊಂಡ್ಲಿ, ಘಟೋತ್ಕಚ ರಾಘವೇಂದ್ರ ಪೇತ್ರಿ,ದೂತನ ಪಾತ್ರದಲ್ಲಿ ಸತೀಶ ಹಾಲಾಡಿ ಭಾಗ ವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ತಿಳಿಸಿದ್ದಾರೆ

Leave a Reply

Your email address will not be published. Required fields are marked *