• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮುಖವರ್ಣಿಕೆಯಿಂದ ಮಕ್ಕಳು ಸಂಭ್ರಮಿಸುವ ದೃಶ್ಯ ಮನಮೋಹಕ: ಕೃಷ್ಣಮೂರ್ತಿ ಉರಾಳ

ByKiran Poojary

Apr 22, 2024

ಕೋಟ: ಮುಖವರ್ಣಿಕೆ ತನ್ನೊಳಗಿನ ಕಲಾವಿದನನ್ನು ಅಭಿವ್ಯಕ್ತಗೊಳಿಸುತ್ತದೆ. ಒಂದಿಷ್ಟು ಬಣ್ಣವನ್ನು ಮಕ್ಕಳಲ್ಲಿ ಕೊಟ್ಟಾಗ ತಾನು ಕಂಡ ಚಿತ್ರಣವನ್ನು ಮುಖವರ್ಣಿಕೆಯಲ್ಲಿ ವ್ಯಕ್ತ ಪಡಿಸುತ್ತಾರೆ. ಮುಖಕ್ಕೆ ಒಂದಷ್ಟು ನಾಮವನ್ನು ಬಳಿದು ಕನ್ನಡಿ ಹಿಡಿದು, ಹುಬ್ಬು, ಬಾಯಿಯನ್ನು ಚಲನೆ ಮಾಡಿ ಮಾನವ ತನಗೇ ಗೊತ್ತಿಲ್ಲದಂತೆ ಅಭಿನಯಿಸುವುದಕ್ಕೆ ಆರಂಭಿಸುತ್ತಾರೆ. ಮಕ್ಕಳು ಇದರಿಂದ ಹೊರತಲ್ಲ. ಮಕ್ಕಳು ಪರಸ್ಪರ ಮುಖವರ್ಣಿಕೆಯನ್ನು ಮಾಡಿಕೊಂಡು ಸಂಭ್ರಮಿಸುವ ದೃಶ್ಯ ಮನಮೋಹಕ ಎಂದು ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಅಭಿಪ್ರಾಯಪಟ್ಟರು.

‘ಶ್ವೇತಯಾನ-20’ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಕ್ರಿಯೇಷನ್ಸ್ ಆಯೋಜಿಸಿಕೊಂಡಿರುವ ‘ರಜಾರಂಗು-24’ 10ನೇ ದಿನದ ಕಾರ್ಯಕ್ರಮದಲ್ಲಿ ‘ಯಕ್ಷಗಾನ ಮುಖವರ್ಣಿಕೆ ಶಿಬಿರ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕೃಷ್ಣಮೂರ್ತಿ ಉರಾಳರು ಮಾತನ್ನಾಡಿದರು.
ರಂಗ ನಿರ್ದೇಶಕ ಅಶೋಕ್ ಮೈಸೂರು ಯಕ್ಷ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರನ್ನು ಗೌರವಿಸಿದರು. ರಂಜಿತ್ ಬ್ರಹ್ಮಾವರ, ಶ್ರೀಶ ತೆಕ್ಕಟ್ಟೆ ಮುಖವರ್ಣಿಕೆ ಕಾರ್ಯಗಾರದಲ್ಲಿ ಸಹಕರಿಸಿದರು.

‘ಶ್ವೇತಯಾನ-20’ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಕ್ರಿಯೇಷನ್ಸ್ ಆಯೋಜಿಸಿಕೊಂಡಿರುವ ‘ರಜಾರಂಗು-24’ 10ನೇ ದಿನದ ಕಾರ್ಯಕ್ರಮದಲ್ಲಿ ‘ಯಕ್ಷಗಾನ ಮುಖವರ್ಣಿಕೆ ಶಿಬಿರ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕೃಷ್ಣಮೂರ್ತಿ ಉರಾಳರು ಮಾತನ್ನಾಡಿದರು. ರಂಗ ನಿರ್ದೇಶಕ ಅಶೋಕ್ ಮೈಸೂರು, ರಂಜಿತ್ ಬ್ರಹ್ಮಾವರ, ಶ್ರೀಶ ತೆಕ್ಕಟ್ಟೆ ಇದ್ದರು.

Leave a Reply

Your email address will not be published. Required fields are marked *