• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಜೋಗ ಫಾಲ್ಸ್ (ಶಿವಮೊಗ್ಗ) : ಮೈದುಂಬಿದ ಜೋಗ; ಮುಸುಕಿದ ಮಬ್ಬಿನಲಿ ಕಾಣದ ವೈಭೋಗ

ByKiran Poojary

Jul 24, 2023

ಜೋಗ್ ಫಾಲ್ಸ್ : ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮುಕ್ಕುತ್ತಿದೆ. ಜೋಗ ಜಲಪಾತದ ಸನಿಹದಲ್ಲೇ ಇರುವ ಮಾವಿನಗುಂಡಿ ಜಲಪಾತವೂ ಸಹ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಪ್ರವಾಸಿಗರು ಜಲಪಾತಕ್ಕೆ ಭೇಟಿ ನೀಡುತ್ತಿದ್ದಾರೆ. ಸುರಿಯುವ ಭಾರಿ ಮಳೆಯಲ್ಲಿಯೇ ಜಲಪಾತ ನೋಡಲು ಪ್ರವಾಸಿಗರಿಗೆ ಸ್ವರ್ಗ. ಆದರೆ, ಗಂಟೆಗಟ್ಟಲೆ ಕಾದರೂ ಸಹ ಜಲಪಾತದ ವೈಭೋಗವನ್ನು ಸವಿಯಲು ಪ್ರವಾಸಿಗರಿಗೆ ಬಲು ಕಷ್ಟ. ಮಂಜಿನ ಪರದೆಯಲ್ಲಿ ಜೋಗದ ಸಿರಿ ಮುಚ್ಚಿ ಹೋಗಿರುವುದು. ಜೋರಾದ ಮಳೆ ಗಾಳಿ ಬಂದಾಗ ಮಾತ್ರ ಕೆಲವೇ ಕೆಲವು ಸೆಕೆಂಡ್‌ಗಳಷ್ಟು ಮಾತ್ರ ಜಲಪಾತವು ಕಾಣ ಸಿಗುತ್ತದೆ.

Leave a Reply

Your email address will not be published. Required fields are marked *