• Mon. May 6th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಆ.6 ರಂದು ಮಹಿಳಾ ವಿಭಾಗದಿಂದ ಸ್ವಜಾತಿ ಬಾಂಧವರಿಗಾಗಿ ಆಷಾಢ ಅಡುಗೆ ಸ್ಪರ್ಧೆ

ByKiran Poojary

Aug 4, 2023

ಮುಂಬಯಿ – ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ವತಿಯಿಂದ ಸ್ವಜಾತಿ ಬಾಂಧವರಿಗಾಗಿ ಆಷಾಡ ಅಡುಗೆ ಸ್ಪರ್ಧೆಯನ್ನು ಆಗಸ್ಟ್ 6 ರಂದು ಮದ್ಯಾಹ್ನ 3 ರಿಂದ ಡೊಂಬಿವಲಿ ಪಶ್ಚಿಮದ ರೈಲ್ವೆ ಸ್ಟೇಷನ್ ಬಳಿ ಇರುವ ಪ್ರೀತಿ ಬ್ಯಾಂಕ್ವೆ ಟ್‌ನ 2ನೇ ಮಹಡಿಯ ಸಭಾಭವನದಲ್ಲಿ ಸಂಘದ ಗೌ, ಅಧ್ಯಕ್ಷ ಸುರೇಶ್‌ ಕಾಂಚನ್‌ರವರ ಗೌರವ ಉಪಸ್ಥಿತಿಯಲ್ಲಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ. ಸುದೀಪ ಮಹಾಬಲ್ ಕುಂದರ್ ಇವರ ನೇತತ್ವದಲ್ಲಿ ಆಯೋಜಿಸಲಾಗಿದೆ.

ಆಷಾಢದಲ್ಲಿ ಊರಿನಲ್ಲಿ ತಯಾರಿಸುವ ತಿಂಡಿ-ತಿನಸುಗಳನ್ನು ಸಮಾಜದ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ.

ದೋಸೆ ವಿಭಾಗದಲ್ಲಿ ರವದೋಸೆ, ಉದ್ದು ದೋಸೆ, ನೀರ್ ದೋಸೆ ಇತ್ಯಾದಿಗಳನ್ನು ತಯಾರಿಸಬಹುದು. ಕಡುಬು ತಿಂಡಿ ವಿಭಾಗದಲ್ಲಿ ಹಲಸಿನ ಹಣ್ಣಿನ ಕಡುಬು, ಪತ್ರಡೆ ಇತ್ಯಾದಿಗಳನ್ನು ತಯಾರಿಸಬಹುದು. ಕುಂದಾಪುರ ಶೈಲಿಯ ಕೋಳಿ ಪದಾರ್ಥ ಅಥವಾ ಇನ್ನಿತರ ಶೈಲಿಯ ಕೋಳಿ ವಿಶೇಷ ಪದಾರ್ಥಗಳನ್ನು ಈ ವಿಭಾಗದಲ್ಲಿ ತಯಾರಿಸಲು ಅವಕಾಶವಿದೆ.

ಮೀನು ಪಲ್ಯ ಕರಿ ತಯಾರಿಕೆಯ ವಿಭಾಗದಲ್ಲಿ ಬಂಗುಡೆ, ಬೂತಾಯಿ, ಸುರ್ಮಯಿ, ಪಾಪ್ಲೆಂಟ್ ಇತ್ಯಾದಿ ಮೀನುಗಳನ್ನು ಬಳಸಬಹುದು. ಪ್ರತಿಯೊಂದು ವಿಭಾಗದಲ್ಲೂ ಮೊದಲು ಹೆಸರು ನೋಂದಾಯಿಸಿದ 10 ಮಂದಿ ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದ್ದು, ನಾಲ್ಕು ವಿಭಾಗಗಳಲ್ಲಿ 30 ಸ್ಪರ್ಧಿಗಳು ಭಾಗವಹಿಸಬಹುದು. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರೋತ್ಸಾಹಕ ಬಹುಮಾನಳನ್ನು ವಿತರಿಸಲಾಗುವುದು.

ಸ್ಪರ್ಧಿಗಳು ತಯಾರಿಸುವ ಎಲ್ಲಾ ಪದಾರ್ಥಗಳಲ್ಲೂ ಸುಮಾರು 5 ಜನರಿಗೆ ಬೇಕಾಗುವಷ್ಟು ಪದಾರ್ಥಗಳು ಇರತಕ್ಕದ್ದು. ಸ್ಪರ್ಧಿಗಳು ತಾವು ಹೆಸರು ನೋಂದಾಯಿಸಿದ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ತರಬೇಕು. ಕ್ಯಾಟರಿಂಗ್, ಅಡುಗೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ತಜ್ಞರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ.

ಮೊಗವೀರ ಸಮಾಜದ ಯಾವುದೇ ವ್ಯಕ್ತಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳು ತಯಾರಿಸಿದ ಆಹಾರದ ರುಚಿ ಸ್ಪರ್ಧಿಗಳು ಪ್ರಸ್ತುತಪಡಿಸುವ ರೀತಿ, ತಯಾರಿಸಿದ ಪದಾರ್ಧಗಳ ಸ್ವಾದ, ಪದಾರ್ಥಗಳನ್ನು ಬಳಸುವ ಪಾತ್ರೆಗಳ ಶೃಂಗಾರ, ಆಹಾರಗಳನ್ನು ತಯಾರಿಸಿದ ರೀತಿ, ಬಳಸಿದ ಪದಾರ್ಥಗಳು ಇತ್ಯಾದಿಗಳನ್ನು ತೀರ್ಪುಗಾರರು ಪರಿಗಣಿಸಲಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.

ಸ್ಪರ್ಧಿಗಳನ್ನು ತಮ್ಮ ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಶರಾವತಿ 98923862867, ನಿಶಾ ಮೆಂಡನ್ 9967371724, ಹೇಮಾ ಪುತ್ರನ್ 8108544557 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕಾಗಿ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ವಸಂತಿ ಕುಂದರ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *