• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟಿ ಚೆನ್ನಯ್ಯ ಕ್ರೀಡೋತ್ಸವ – 2023 2024

ByKiran Poojary

Jan 4, 2024

ಮುಂಬಯಿ ಬಿಲ್ಲವರ ಅಭಿಮಾನದ ಸಂಘಟನೆಯಾದ ಬಿಲ್ಲವರ ಅಸೋಸಿಯೇಷನ್ ಕಳೆದ 90ವರ್ಷಗಳಿಂದ ಸಮಾಜ ಬಾಂಧವರನ್ನು ಏಕ ಛತ್ರದ ಅಡಿಯಲ್ಲಿ ಒಗ್ಗೂಡಿಸಿ ನಾಡು – ನುಡಿ, ಭದ್ರತೆ – ಭವ್ಯತೆ, ಸಂಸ್ಕ್ರತಿ ಸಭ್ಯತೆಗಾಗಿ ಮತ್ತು ಸಾಹಿತ್ಯ , ಕಲೆ, ವಿದ್ಯೆ ಮತ್ತು ಕ್ರೀಡೆ ನಿರಂತರ ಬೆಳೆಯಲು ಶ್ರಮಿಸಿದವರಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಸಮಾಜದ ಯುವ ಜನಾಂಗವನ್ನು ಸ್ಪರ್ಧಾತ್ಮಕ ಕ್ರೀಡಾ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಪ್ರತಿ ವರ್ಷ ಯುವ ಅಭ್ಯುದಯ ಉಪ ಸಮಿತಿ ಒಳಾಂಗಣ ಕ್ರೀಡೆ ( ಕಾಂತಾಬಾರೆ – ಬೂದಾಬಾರೆ) ಮತ್ತು ಹೊರಾಂಗಣ ಕ್ರೀಡೆ (ಕೋಟಿ – ಚೆನ್ನಯ ಕ್ರೀಡೋತ್ಸವ) (ಯುತ್ ಫೆಸ್ಟಿವಲ್ ನ್ನು )ಆಯೋಜಿಸಿ ಯಶಸ್ವಿಯಾಗಿ ಪೂರೈಸುತ್ತಿದೆ. ವಿಶೇಷ ವಾಗಿ ಮುಂಬರುವ ದಿನದಲ್ಲಿ ಯುವ ಜನಾಂಗದ ಮಿಲನಕ್ಕಾಗಿ ಪಿಕ್ ನಿಕ್ , ಕ್ರಿಕೆಟ್ ಟೂರ್ನಮೆಂಟ್ ಮತ್ತು ಯುತ್ ಫೆಸ್ಟಿವಲ್ ಮಾಡುವುದೆಂದು ನಿರ್ಧರಿಸಲಾಗಿದೆ.

ಪ್ರಸಕ್ತ ವರ್ಷದಲ್ಲಿಯೂ ಕೂಡಾ ದಿನಾಂಕ 21.01.2024ರಂದು ಕೋಟಿ ಚೆನ್ನಯ ಕ್ರೀಡೋತ್ಸವವನ್ನು ಯುನಿವರ್ಸಿಟಿ ಸ್ಪೋರ್ಟ್ಸ್ ಗ್ರೌಂಡ್ ಮರೀನ್ ಲಾಯಿನ್ಸ್ ಇಲ್ಲಿ ಆಯೋಜಿಸಿ ಯಶಸ್ವಿಯಾಗಿ ನೆರವೇರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು ಸಾವಿರಾರು ಕ್ರೀಡಾಪಟುಗಳು, 5 ಸಾವಿರಕ್ಕೂ ಮಿಕ್ಕಿ ನಮ್ಮ 22ಸ್ಥಳೀಯ ಕಚೇರಿಗಳ ಪರಿಸರದಲ್ಲಿ ವಾಸಿಸುವ ಸಮಾಜ ಬಾಂಧವರು, ಹಿತೈಷಿಗಳು ಸಹಭಾಗಿಯಾಗುವ ನಿರೀಕ್ಷೆ ಇದೆ.

ನಮ್ಮ ಐತಿಹಾಸಿಕ ಮಹಾಪುರುಷರ ಹೆಸರಿನಲ್ಲಿ ನಡೆಯುವ ಮಹಾನ್ ಕ್ರೀಡೋತ್ಸವವು ಸ್ನೇಹ ಮಿಲನವಾಗಿದ್ದು ವಿಜೃಂಭಣೆಯಿಂದ ನಡೆಯಲಿದೆ. ‌ಸಂಪೂರ್ಣ ಕಾರ್ಯವನ್ನು “SAHANI STAR” YouTube Chanel ನಲ್ಲಿ ಹಾಗೂ ಕ್ರೀಡಾಂಗಣದಲ್ಲಿ ಅಳವಡಿಸಲಾಗುವ LED SCREEN ಮುಖಾಂತರ ನಿರಂತರವಾಗಿ ಪ್ರಸಾರ ಮಾಡಲಾಗುವುದು. ಈ ಘನ ಕಾರ್ಯದಲ್ಲಿ ಸಮಾಜ ಬಾಂಧವರಾದ ತಾವು ಕೈ ಜೋಡಿಸಿದರೆ ಸಂಘಟನೆಗೆ ಆನೆ ಬಲ ಬಂದಂತಾಗುವುದು. ಇದುವರೆಗೆ ನಾವು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲ ತನು – ಮನ- ಧನ ಸಹಾಯವನ್ನಿತ್ತು ಸಹಕರಿಸಿದ್ದೀರಿ. ಈ ಸಲವೂ ಯುವಕರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪೋತ್ಸಾಹಿಸಲು ಸಹಕರಿಸುವಿರಿ ಎಂದು ನಮ್ಮ ಪ್ರಬಲ ಆಶೆ. ನಮ್ಮ ನಿರೀಕ್ಷೆಗೂ ಮೀರಿ ಉದಾರ ದಾನಿಗಳು ಸಹಕರಿಸುವಿರೆಂದು ಆಶಿಸಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ನಿಮ್ಮಗೆಲ್ಲ ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ ಎಂದು ಪ್ರಾರ್ಥಿಸುತ್ತೇವೆ.

ವಿಶೇಷ ಸೂಚನೆ: ಯುನಿವರ್ಸಿಟಿ ಸ್ಪೋರ್ಟ್ಸ್ ಗ್ರೌಂಡ್ ಮರೀನ್ ಲೈನ್ ನಲ್ಲಿ ನಡೆಯವ ಕೋಟಿ ಚೆನ್ನಯ ಕ್ರೀಡಾ ಕೂಟದಲ್ಲಿ ಅಳವಡಿಸುವ LED SCREEN ನಲ್ಲಿ ನಿಮ್ಮ ಜಾಹೀರಾತುಗಳನ್ನು ಸ್ವೀಕಲಿಸಲಾಗುವುದು
ಸಂಪರ್ಕಕ್ಕಾಗಿ :
9819868999
8369010727
912231567010
02226176404

ತಮ್ಮ ಸಂಪೂರ್ಣ ಸಹಕಾರವನ್ನು ಈ ಕೆಳಗಿನ SB Account ಗೆ ಕಳಿಸಬೇಕಾಗಿ ನಮ್ರ ವಿನಂತಿ.Bank Name : Bharat co – Op Bank
A/c No: 001110100005166
Branch : Kalina Branch
IFSC Code : BCBM 0000012

Leave a Reply

Your email address will not be published. Required fields are marked *