• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಹಕಾರಿ ಕುಟುಂಬ ಸಮ್ಮಿಲನ ಮತ್ತು ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ

ByKiran Poojary

May 24, 2023

ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ, ಇವರ ಆಶ್ರಯದಲ್ಲಿ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಯವರ ಕುಟುಂಬ ಸದಸ್ಯರಿಗಾಗಿ “ಸಹಕಾರಿ ಕುಟುಂಬ ಸಮ್ಮಿಲನ” ಮತ್ತು ಸಂಘದ ಸೇವೆಯಿಂದ ಇತ್ತೀಚೆಗೆ ನಿವೃತ್ತರಾಗಿರುವ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕುಮಾರ ಇವರಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಂದ “ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ” ಮೇ. 21ರಂದು ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಥೊಲಿಕ್ ಕ್ರೆಡಿಟ್ ಕೋ-ಆಪ್‍ರೇಟಿವ್ ಸೊಸೈಟಿ, ಬ್ರಹ್ಮಾವರ ಇದರ ಅಧ್ಯಕ್ಷ ವೆಲೇರಿಯನ್ ಮ್ಯಾನೇಜಸ್ ಇವರು ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಮತ್ತು ನಿವೃತ್ತ ಸಿಬ್ಬಂದಿಯವರಿಗೆ ಶುಭ ಹಾರೈಸಿದರು.

ಪ್ರಜ್ಞಾ ವಿದ್ಯಾ ಸಂಸ್ಥೆ ಕೋಟ ಇದರ ಪ್ರಾಂಶುಪಾಲ ಪ್ರಕಾಶ್ ಭಟ್ ಮತ್ತು ವೆಂಕಟೇಶ ಭಟ್, ಸಂಘದ ಉಪಾಧ್ಯಕ್ಷರಾದ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ ಟಿ. ಮಂಜುನಾಥ, ಡಾ. ಕೃಷ್ಣ ಕಾಂಚನ್, ಮಹೇಶ ಶೆಟ್ಟಿ, ಪ್ರೇಮಾ ಎಸ್. ಪೂಜಾರಿ, ರಶ್ಮಿತಾ, ಗೀತಾ ಶಂಭು ಪೂಜಾರಿ, ಅಚ್ಯುತ ಪೂಜಾರಿ, ಸಂಘದ ಸಲಹಾ ಸಮಿತಿ ಸದಸ್ಯರು, ನಿವೃತ್ತ ಮತ್ತು ಹಾಲಿ ಸಿಬ್ಬಂದಿಯವರು, ಸಿಬ್ಬಂದಿಯವರ ಕುಟುಂಬ ಸದಸ್ಯರು, ಆಭರಣ ಬೆಲೆ ನಿರ್ಣಾಯಕರು, ಭಾಗ್ಯನಿಧಿ ಸಂಗ್ರಾಹಕರು ನಿವೃತ್ತ ಸಿಬ್ಬಂದಿಗಳು, ಕುಮಾರರವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ 35 ವರ್ಷ ಸೇವೆ ಸಲ್ಲಿಸಿ ದಿನಾಂಕ ಮೇ.30ರಂದು ನಿವೃತ್ತರಾಗಿರುವ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕುಮಾರ ಇವರನ್ನು ಸಭಾ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸಿಬ್ಬಂದಿ ಸಹನಾ ಪ್ರಾರ್ಥಿಸಿದರು,ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಕಾಶ್ ಭಟ್ ಮತ್ತು ವೆಂಕಟೇಶ ಭಟ್ ಇವರಿಂದ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಯವರು ಮತ್ತು ಕುಟುಂಬ ಸದಸ್ಯರಿಗಾಗಿ “ಸಹಕಾರಿ ಕುಟುಂಬ ಸಮ್ಮಿಲನ” ಕಾರ್ಯಕ್ರಮ ನಡೆಯಿತು.

ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ, ಇವರ ಆಶ್ರಯದಲ್ಲಿ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಯವರ ಕುಟುಂಬ ಸದಸ್ಯರಿಗಾಗಿ “ಸಹಕಾರಿ ಕುಟುಂಬ ಸಮ್ಮಿಲನ” ಮತ್ತು ಸಂಘದ ಸೇವೆಯಿಂದ ನಿವೃತ್ತರಾಗಿರುವ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕುಮಾರ ಇವರನ್ನು ಸಭಾ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *