• Sat. May 4th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಆತ್ಮವಿಶ್ವಾಸ

ByKiran Poojary

Jul 18, 2023

✒️ ಅಶ್ವಿನಿ ಅಂಗಡಿ, ಬದಾಮಿ…..

ಆತ್ಮವಿಶ್ವಾಸವು ಮನುಷ್ಯರ ಆಂತರ್ಯದಲ್ಲಿ ಹುದುಗಿರುವ ಶಕ್ತಿಯಲ್ಲ ಅದು ಅವರ ಬಾಹ್ಯ ಪರಿಶ್ರಮದಿಂದಲೇ ಪ್ರಜ್ವಲಿಸುವ ಒಂದು ಸಾಧನವಾಗಿದೆ.ಆತ್ಮವಿಶ್ವಾಸಕ್ಕೆ ಉತ್ತೇಜಕ ಮಾತು, ಉತ್ತೇಜಕ ಕಾರ್ಯ, ಹಾಗೂ ಆಶ್ವಾಸನೆಗಳೇ ಮೂಲ ಆಹಾರವಾಗಿದೆ.ಅಲ್ಲದೆ ನಮ್ಮಲ್ಲಿ ಆತ್ಮವಿಶ್ವಾಸವು ತನ್ನಿಂದ ತಾನೇ ಹುಟ್ಟುವುದಿಲ್ಲ ಅದನ್ನು ನಾವು ಸತತ ಪರಿಶ್ರಮ ಧೈರ್ಯ ಹಾಗೂ ನಂಬಿಕೆಯಿಂದ ಸಾಧಿಸಿಕೊಳ್ಳುವುದಾಗಿದೆ.

ಸಾಧಿಸುವ ಛಲ ಪಡೆದೆ ಪಡೆಯುವೇ ಎಂಬಂತಹ ಹಠಗಳು ನಮ್ಮಲ್ಲಿ ಒಂದು ಅದ್ವಿತೀಯ ಶಕ್ತಿಯನ್ನು ಹುಟ್ಟು ಹಾಕಿ ಯಶಸ್ಸಿನ ಶಿಖರವನ್ನೇರಲು ಸಹಾಯ ಮಾಡುವುದಾಗಿದೆ ಸೋತಾಗ, ಎಡವಿದಾಗ ,ಉತ್ತೇಜಿಸುವ ಕೆಲ ಸಹ ಹೃದಯಗಳು ನಮ್ಮಲ್ಲಿ ದೃಢತೆಯನ್ನು ತುಂಬಿ ಮರು ಪ್ರಯತ್ನಕ್ಕೆ ದಾರಿ ಮಾಡಿ ಕೊಡಬೇಕು. ಅಲ್ಲದೆ ಉತ್ತಮ ಮಾರ್ಗದರ್ಶಕರು ನಮ್ಮ ಯಶದಿಕ್ಕನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.”your success will be determined by your own confidence and fortitude ” ಈ ಗಾದೆಯ ಸಾರದಂತೆ ನೀವು ಸಾಧಿಸಿದ ಯಶಸ್ಸು ನಿಮ್ಮಲ್ಲಿಯ ಆತ್ಮ ವಿಶ್ವಾಸ ಹಾಗೂ ಆತ್ಮಸ್ಥೈರ್ಯದ ಫಲವಾಗಿದೆ ಎಂಬುದಾಗಿದೆ.

ಆದ್ದರಿಂದ ಪ್ರತಿ ಹೆಜ್ಜೆಯಲ್ಲೂ ಸಾಧನೆ ಎಂಬ ಸಕಾರಾತ್ಮಕ ಕನಸನ್ನೇ ಹೊತ್ತು ಸಾಗೋಣ ನಮ್ಮ ಪರಿಶ್ರಮದಿಂದ ಕನಸು ಒಮ್ಮೆ ಜಗ ಮೆಚ್ಚುವಂತೆ ನನಸಾಗಿ ಕೈ ಹಿಡಿದು ಮೇಲಕ್ಕೆ ಎತ್ತುವುದು.ಇನ್ನೂ ಮಕ್ಕಳಲ್ಲಿ ಆತ್ಮವಿಶ್ವಾಸ ಧೈರ್ಯ ಬೆಳಸಬೇಕು ವಯಸ್ಕರಲ್ಲಿ ಆತ್ಮವಿಶ್ವಾಸವು ವೃದ್ಧಿಯಾಗುವಂತೆ ಪ್ರೇರಣೆ ನೀಡಬೇಕು ಅಲ್ಲದೆ ವೃದ್ಧರಲ್ಲಿ ಆಶಾಭಾವನೆ ಆಸಕ್ತಿಗಳಂತಹ ಅವಶ್ಯಯೋಚನೆಗಳ ರೆಕ್ಕೆ ಬಿಚ್ಚಬೇಕು. ಹೀಗಾದಾಗ ಮಾನವ ಸಂಪನ್ಮೂಲವು ಸದ್ಬಳಕೆಯಾಗಿ ಸಮಾಜಕ್ಕೆ ಕೊಡುಗೆಗಳಾಗಿ ಹೊರಹೊಮ್ಮಲು ಸಾಧ್ಯ 19ನೇ ಶತಮಾನದಲ್ಲಿ “ಅಹಿಂಸಾ ಮಾರ್ಗವೆಂಬ ಆತ್ಮವಿಶ್ವಾಸವು”ನಮ್ಮ ಪುಣ್ಯ ಭೂಮಿಯನ್ನು ದಾಸ್ಯದಿಂದ ಮುಕ್ತಗೊಳಿಸಿದ್ದು ಅಮರ. ಬಡತನ ಅವಮಾನ ಹಾಗೂ ಟೀಕೆಗಳಿಗೆ ಒಳಗಾದ ಎಷ್ಟೋ ಸಾಮಾನ್ಯರು ಛಲಪಟ್ಟು ಆತ್ಮವಿಶ್ವಾಸದಿಂದ ಸಾಧಕರಾಗಿದ್ದಾರೆ. ಅದಕ್ಕಾಗಿ ಬದುಕಲ್ಲಿ ಬರುವ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ಸಾಧನೆಯ ನೆರಳನ್ನು ಹಿಂಬಾಲಿಸುತ್ತಾ ಹೋದರೆ ಜನ್ಮ ಪರಿಪೂರ್ಣತೆಯನ್ನು ಹೊಂದಬಹುದಾಗಿದೆ.

✒️ ಅಶ್ವಿನಿ ಅಂಗಡಿ, ಬದಾಮಿ…..

Leave a Reply

Your email address will not be published. Required fields are marked *