• Sat. Apr 27th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಚುನಾವಣೆ ನಂತರ ಶಂಕರ್ ಎ ಕುಂದರ್ ರವರಿಗೆ ಉನ್ನತ ಸ್ಥಾನ ನೀಡುವುದಾಗಿ ಭರವಸೆ ನೀಡಿದ ಜಯಪ್ರಕಾಶ್ ಹೆಗ್ಡೆ

ByKiran Poojary

Mar 26, 2024

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರಿಗೆ ಯಾವುದೇ ನಿಗಮದ ಅಧ್ಯಕ್ಷ ಹುದ್ದೆ ಸಿಗದಿದ್ದ ಕಾರಣ ಅಸಮಧಾನಗೊಂಡಿದ್ದು, ಈ ಬಗ್ಗೆ ಪ್ರಮುಖ ಕಾರ್ಯಕರ್ತರ ಸಭೆ ನಡೆದು ಅವರಿಗೆ ಬೆಂಬಲವನ್ನ ಸೂಚಿಸಿ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ನಿರ್ಧರಿಸಿದ್ದರು.

ಇದನ್ನು ಮನಗಂಡು ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆಯಂತೆ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ರವರ ಮಾರ್ಗದರ್ಶನದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ರವರ ನೇತೃತ್ವದಲ್ಲಿ ಬ್ರಹ್ಮಾವರದ ಸಿಟಿ ಸೆಂಟರ್ ನಲ್ಲಿ ಶಂಕರ್ ಎ ಕುಂದರ್ ರವರು ಮತ್ತು ಅವರ ಪ್ರಮುಖ ಬೆಂಬಲಿಗರನ್ನು ಭೇಟಿಯಾಗಿ ತಮಗೆ ಚುನಾವಣೆ ಮುಗಿದ ನಂತರ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಾನೇ ಮುಖತಹ ಭೇಟಿ ಮಾಡಿಸಿ ಅವಕಾಶ ನೀಡುವ ಭರವಸೆಯೊಂದಿಗೆ ಶಂಕರ್ ಎ ಕುಂದರ್ ರವರು ಜಯಪ್ರಕಾಶ್ ಹೆಗ್ಡೆಯವರು ನೀಡಿದ ಭರವಸೆಯ ಮೇರೆಗೆ ಸ್ಪಂದಿಸಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯಕರ್ತರೊಂದಿಗೆ ದುಡಿದು  ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ನರಸಿಂಹಮೂರ್ತಿ, ಉಡುಪಿ ಜಿಲ್ಲಾ ಕಾಂಗ್ರೆಸ್  ಕಾರ್ಯಧ್ಯಕ್ಷ  ಕಿಶನ್ ಹೆಗ್ಡೆ, ಶಂಕರ ಬಂಗೇರ ಕೋಡಿ ಕನ್ಯಾನ, ಬಸವ ಪೂಜಾರಿ ಗುಂಡ್ಮಿ, ಎಂ. ಎಸ್. ಸಂಜೀವ,  ಶ್ರೀನಿವಾಸ್ ಅಮೀನ್, ರವೀಂದ್ರ ಕಾಮತ್ ಗುಂಡ್ಮಿ, ದಿನೇಶ್ ಬಂಗೇರ ಗುಂಡ್ಮಿ, ಬಾರ್ಕುರ್ ರಮಾನಂದ ಶೆಟ್ಟಿ,  ಗಣೇಶ್ ಕೆ ನೆಲ್ಲಿಬೆಟ್ಟು,  ಶ್ರೀನಿವಾಸ್ ವಡ್ಡರ್ಸೆ, ಸುರೇಶ್ ಕಚ್ಕೆರೆ, ರಮೇಶ್ ಎಸ್ ತಿಂಗಳಾಯ, ನವೀನ್ ಕೆ ಕುಂದರ್,  ಜಯ ಏನ್ ಸುವರ್ಣ, ವಾಮನ್ ಕೆ ಕುಂದರ್, ದಯಾನಂದ ಎಂ ಕೋಟ್ಯಾನ್, ರಮೇಶ್ ಎಂ ಕೋಟ್ಯಾನ್, ಜಯ ಕೆ ಕುಂದರ್, ಹರೀಶ್ ಕುಂದರ್, ಶ್ರೀನಿವಾಸ್ ಶೆಟ್ಟಿಗಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *