• Sat. Apr 27th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಲಿಗ್ರಾಮ- ಕೋಟ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಬೃಹತ್ ಕಾರ್ಯಕರ್ತರ ಸಮಾವೇಶ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿಗಳನ್ನು ಗೆಲಿಸಲಿದೆ – ಕೆ.ಜಯಪ್ರಕಾಶ್ ಹೆಗ್ಡೆ

ByKiran Poojary

Mar 27, 2024

ಕೋಟ: ರಾಜ್ಯ ಸರಕಾರದ ಮಹತ್ತರವಾದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮತವಾಗಿ ಪರಿವರ್ತಿಸಿ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಸಾಲಿಗ್ರಾಮದ ವಿಶ್ವಕರ್ಮ ಸಭಾಂಗಣದಲ್ಲಿ ಹಮ್ಮಿಕೊಂಡ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಲಿದೆ ಅದನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದಾಗಬೇಕಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಸಾಮಾಜಿಕ , ಉದ್ಯೋಗ, ಶಿಕ್ಷಣದ ಜತೆ ಬಡ ಹಾಗೂ ಮಧ್ಯಮ, ಹಿಂದುಳಿದವರ ಕಲ್ಯಾಣಕ್ಕಾಗಿ ಧ್ವನಿಯಾಗಿದ್ದೇನೆ, ಕೋಡಿ,ಕುಂದಾಪುರ ಭಾಗಗಳ ಹಕ್ಕು ಪತ್ರದ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯ ಸರಕಾರದ ಮೂಲಕ ಹಕ್ಕುಪತ್ರಲಭಿಸಲಿದೆ,ಮೀನುಗಾರರ ಬಗ್ಗೆ ಸಾಕಷ್ಟು ಕಾರ್ಯಗಳನ್ನು ಮಾಡಿದ ಹೆಮ್ಮೆ ನನಗಿದೆ ಎಂದರಲ್ಲದೆ ಅಧಿಕಾರ ಮುಖ್ಯವಲ್ಲ ಆದರೆ ಸಿಕ್ಕ ಅಧಿಕಾರವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಬಹುಮುಖ್ಯವಾಗಿದೆ, ಈ ದಿಸೆಯಲ್ಲಿ ಕಳೆದ ಹತ್ತು ವರ್ಷಗಳ ಈ ಲೋಕಸಭಾ ಕ್ಷೇತ್ರದ ಆಡಳಿತಕ್ಕೆ ಹೊಲಿಸಿದರೆ ಹಿಂದೆ 2ವರ್ಷ ಅವಧಿಯಲ್ಲಿ ಈ ಎರಡು ಭಾಗಗಳಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇನೆ.

ಅದರ ಆಧಾರದಲ್ಲಿ ಈ ಬಾರಿ ಮತ ಹಾಕಲಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಕಾರ್ಯನಿರ್ವಹಿಸುವುದಿಲ್ಲ ಬದಲಾಗಿ ಅಲ್ಲಿ ಜನಸಾಮಾನ್ಯರ ಸಾಮಾನ್ಯ ವಿಚಾರಕ್ಕೆ ತುಡಿಯುವ ಮುಖಂಡರಿದ್ದಾರೆ, ಇಂದಿರಾ ಗಾಂಧಿ , ದೇವರಾಜು ಅರಸು ಅವರ ಉಳುವವನೆ ಭೂಮಿಯ ಒಡೆಯ ಕಾನೂನಿಂದ ಅದೆಷ್ಟೊ ಕುಟುಂಬಗಳು ಇಂದು ನಿರ್ಭಿತರಾಗಿ ದುಡಿದು ತಿನ್ನುವ ಕಾಲಕ್ಕೆ ಕಾಂಗ್ರೆಸ್ ಸರಕಾರವೇ ಕಾರಣವಾಗಿದೆ.ಈ ನಿಟ್ಟಿನಲ್ಲಿ ಬೂತಮಟ್ಟದಲ್ಲಿ ನಮ್ಮಗೆ ಯಶಸ್ಸು ದೊರಕಲಿದೆ.

ಎಐಸಿಸಿ ಈ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಅದರ ಆಧಾರದಲ್ಲಿ ಮನೆ ಮನೆಗೆ   ಮತ ಸಂಗ್ರಹಿಸಲು ಕಾರ್ಯಕರ್ತರು ಸಿದ್ಧರಾಗಿ ಎಂದು ಕರೆ ಇತ್ತರು.
ಕಾರ್ಯಕ್ರಮವನ್ನು ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಎಂ ಎ ಗಫೂರ ಉದ್ಘಾಟಿಸಿ ಮಾತನಾಡಿ ಜಯಪ್ರಕಾಶ್ ಹೆಗ್ಡೆಯವ ಗೆಲುವು ನಿಶ್ಚಿತ ಅನುಮಾನವೇ ಬೇಡ ಏಕೆಂದರೆ ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನ ಸಂತುಷ್ಟರಾಗಿದ್ದಾರೆ,ಇದೇ ಆಧಾರದ ಮೇಲೆ ಸಂಸತ್ತಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಕಾಣಲಿದೆ, 10ವರ್ಷದ ಬಿಜೆಪಿ ಆಡಳಿತದಿಂದ ಗೋ ಬ್ಯಾಕ್ ಚಳುವಳಿ ಅದೇ ಪಕ್ಷದಿಂದ ಅಗುತ್ತಿದೆ,ಆ ರೀತಿಯ ದುರ್ಬಲ ಆಡಳಿತ ವ್ಯವಸ್ಥೆ ಸೃಷ್ಠಿಯಾಗಿದೆ,ಆದರೆ  ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಈ ಚುನಾವಣೆಯಲ್ಲಿ ಕೆಲಸ ನಿರ್ವಹಿಸಲಿದೆ ಇಲ್ಲಿ ಕಾರ್ಯಕರ್ತರೆ ಪಕ್ಷದ ಆಸ್ತಿಯಾಗಿದ್ದಾರೆ ಮನೆ ಮನಗಳಲ್ಲಿ ಕಾಂಗ್ರೆಸ್ ಪಕ್ಷ ದೃಢವಾಗಿ ಮತ್ತೊಮ್ಮೆ ಪುಟಿದೇಳಲಿದೆ ಹೆಗ್ಡೆಯಂತಹ ರಾಜಕಾರಣಿಗಳು ಮತ್ತೊಮ್ಮೆ ಈ ಭಾಗದ ಸಂಸದರಾಗಿ ಕಾಣಲು ಜನ ಹವಣಿಸುತ್ತಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಚ ಅಶೋಕ್ ಕುಮಾರ್ ಕೊಡವೂರ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕುಂದಾಪುರ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ,ಕೋಟ ಸಿ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮಪೂಜಾರಿ, ಮುಖಂಡರುಗಳಾದ ಗೀತಾ ವಾಗ್ಳೆ, ಹರೀಷ್ ಕಿಣಿ, ಅಜಿತ್ ಶೆಟ್ಟಿ, ರಮಾನಂದ ಶೆಟ್ಟಿ, ರೋಷನಿ ಒಲಿವೇರ, ರೇಖಾ ಸುವರ್ಣ, ಸುಶೀಲ ಪೂಜಾರಿ, ಮೊಸೆಸ್ ರೋಡ್ರಿಗ್ರಸ್, ಸುರೇಂದ್ರ ಶೆಟ್ಟಿ, ವಿನಯ್ ಕಬ್ಯಾಡಿ, ಮಲ್ಲಿಕಾ ಬಾಲಕೃಷ್ಣ, ರೋಶನ್ ಶೆಟ್ಟಿ,ಮಮತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಧರ ಪಿ.ಎಸ್ ನಿರೂಪಿಸಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಸಾಲಿಗ್ರಾಮದ ವಿಶ್ವಕರ್ಮ ಸಭಾಂಗಣದಲ್ಲಿ ಹಮ್ಮಿಕೊಂಡ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಎಂ ಎ ಗಫೂರ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಚ ಅಶೋಕ್ ಕುಮಾರ್ ಕೊಡವೂರ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *