

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಸಾಕಷ್ಟು ತ್ಯಾಜ್ಯ ಎಸೆಯುತ್ತಿರುವ ಹಿನ್ನಲ್ಲೆಯಲ್ಲಿ ಅಂತಹ ಬ್ಯ್ಲಾಕ್ ಸ್ಪಾಟ್ ಸ್ಥಳಕ್ಕೆ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಹಾಗೂ ಪಿ.ಡಿ.ಓ ಸುರೇಶ್ ಬಂಗೇರ ದಿಢೀರ್ ದಾಳಿ ನಡೆಸಿ ಕಸ ಎಸೆದವರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಪ್ರತಿ ಸಂದರ್ಭದಲ್ಲೂ ಸ್ಥಳೀಯ ಪಂಚವರ್ಣ ಸಂಸ್ಥೆ ಸ್ವಚ್ಛಗೊಳಿಸಿ ಆ ಭಾಗಗಳನ್ನು ತ್ಯಾಜ್ಯ ಮುಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಇತ್ತ ಸ್ವಚ್ಛಗೊಳಿಸಿದ ಮರುಗಳಿಗೆಯಲ್ಲೆ ಹಗಲು ರಾತ್ರಿ ಎನ್ನದೆ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಹಿನ್ನಲ್ಲೆಯಲ್ಲಿ ಅಲ್ಲಿರುವ ಕಸದ ತೊಟ್ಟೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ವಿಳಾಸ ದೊರೆತ್ತಿದ್ದು ಸ್ಥಳೀಯ ಮಣೂರಿನ ವ್ಯಕ್ತಿಯೊರ್ವರು ತ್ಯಾಜ್ಯ ಎಸೆಯುತ್ತಿರುವುದು ಬೆಳಕಿಗೆ ಬಂದಿದ್ದು , ಅಲ್ಲದೆ ಇತ್ತೀಚಿಗೆ ಕೋಟ ಅಮೃತೇಶ್ವರಿ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಬ್ರಹ್ಮಾವರ ಮೂಲದ ವ್ಯಕ್ತಿಯೊರ್ವ ತ್ಯಾಜ್ಯ ಎಸೆದಿದ್ದು ಆ ವ್ಯಕ್ತಿಗೂ ಪಂಚಾಯತ್ ಬಾರಿ ದಂಡ ವಿಧಿಸಿದೆ. ಜಿಲ್ಲಾಡಳಿತ ಸ್ವಚ್ಛ ಶನಿವಾರ ಯೋಜನೆ ಅನುಷ್ಠಾನಗೊಳಿಸಿದ್ದು ಹೆಚ್ಚಿನ ಪಂಚಾಯತ್ ಗಳು ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುತ್ತಿವೆ.ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಉಪಾಧ್ಯಕ್ಷ ರವೀಂದ್ರ ಜೋಗಿ ಇದ್ದರು.